ಕೊಪ್ಪಳ: ರೇಣುಕಾಚಾರ್ಯ ತುಂಬ ಒಳ್ಳೆಯ ಮಾತು ಹೇಳಿದ್ದಾರೆ. ಬೇಕಿದ್ದರೆ ಕಾಲೇಜಿನ ಸುತ್ತಮುತ್ತ ಹೋಗಿ ನೋಡಿ ಮುಸ್ಲಿಂ ಹೆಣ್ಣು ಮಕ್ಕಳ ಉಡುಪು ಪ್ರಚೋದನೆ ಕೊಡುತ್ತೋ ಅಥವಾ ನಮ್ಮ ಮಕ್ಕಳ ಉಡುಪು ಪ್ರಚೋದನೆ ಕೊಡುತ್ತೋ ಎಂಬುದು ಗೊತ್ತಾಗುತ್ತೆ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಹೇಳಿದ್ದಾರೆ.
ಹೆಣ್ಣು ಮಕ್ಕಳ ಉಡುಪುಗಳೇ ಪ್ರಚೋದನೆಗೆ ಕಾರಣ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುತ್ತಾರೆ ಹೀಗಾಗಿ ಅವರನ್ನು ಯಾರೂ ನೋಡಲ್ಲ. ಮೊದಲು ಚುನಾವಣೆಗೆ ಗಲಾಟೆ ನಡೆಯುತ್ತಿತ್ತು. ಇದೀಗ ಕಾಲೇಜು ಮಕ್ಕಳು ಬೀದಿಗಿಳಿದಿದ್ದಾರೆ. ನಾವು ಯಾರನ್ನೂ ಎತ್ತಿ ಕಟ್ಟೋ ಕೆಲಸ ಮಾಡಲ್ಲ. ಮಕ್ಕಳ ಕೈಯಲ್ಲಿ ಕಲ್ಲು, ಚಾಕು ಕೊಟ್ಟಿರುವುದು ಬಿಜೆಪಿಯವರು ಎಂದು ಹೇಳಿದರು. ಇದು ಬಿಜೆಪಿಯವರು ಮಾಡಿದ್ದು. ನಾವು ಅವರ ಹಿಂದಿದ್ದರೆ ಅವರಿಗೆ ಕಾಂಗ್ರೆಸ್ ಧ್ವಜ ಕೊಡುತ್ತಿದ್ದೆವು. ಹಿಜಬ್ ಗಲಾಟೆಗೆ ಬಿಜೆಪಿ ಕಾರಣ ಎಂದು ಹೆಚ್ ಆಂಜನೇಯ ಹೇಳಿದರು.
PublicNext
09/02/2022 10:39 pm