ಕಲಬುರಗಿ: ರಾಜ್ಯದಾದ್ಯಂತ ಹಿಜಾಬ್ ವಿವಾದ ಭುಗಿಲೆದಿದೆ. ಹಿಜಾಬ್ ಬೆಂಬಲಿಸಿ ಕಲಬುರಗಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ನೂರಾರು ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಹಿಜಾಬ್ ಬೇಕು ಎಂದು ಆಗ್ರಹಿಸಿದ್ದಾರೆ.
ಕಲಬುರಗಿ ನಗರದ ನ್ಯಾಷನಲ್ ಕಾಲೇಜ್, ಅಲ್ ಬದರ್ ಕಾಲೇಜು ಸೇರಿದಂತೆ ವಿವಿಧ ಕಾಲೇಜು ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ಇನ್ನು ಈ ಪ್ರತಿಭಟನೆಗೆ ಕಾಂಗ್ರೆಸ್ ಪಕ್ಷ ಸಾಥ್ ನೀಡಿದೆ. ಕಲಬುರಗಿ ಉತ್ತರ ಶಾಸಕಿ ಖನೀಜ್ ಫಾತೀಮಾ ಸರ್ಕಾರ ಅದು ಹೇಗೆ ಹಿಜಾಬ್ ಬ್ಯಾನ್ ಮಾಡುತ್ತದೆ ನಾವು ನೋಡೆ ಬಿಡ್ತಿವಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಹಿಜಾಬ್ ನಮ್ಮ ಧರ್ಮದ ಸಾಂಪ್ರದಾಯಿಕ ಉಡುಪು, ಇದನ್ನು ಧರಿಸುವುದು ನಮ್ಮ ಹಕ್ಕು,ಸದನದಲ್ಲೂ ಹಿಜಾಬ್ ಧರಿಸಿಯೇ ಭಾಗಿಯಾಗ್ತಿದೆ ಎಂದು ಗುಡುಗಿದ್ದಾರೆ. ಜೊತೆಗೆ ಹಿಜಾಬ್ ಬ್ಯಾನ್ ಮಾಡಿದ್ರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿರನ್ನ ಭೇಟಿಯಾಗಿ ಮಾತನಾಡುವುದಾಗಿಯೂ ತಿಳಿಸಿದ್ದಾರೆ.
PublicNext
05/02/2022 02:32 pm