ಉತ್ತರಾಖಂಡ್: ಹರಿದ್ವಾರ ಮತ್ತು ಉತ್ತರಾಖಂಡ್ ನಲ್ಲಿ ಹಿಂದೂ ಧಾರ್ಮಿಕ ನಾಯಕರ ದ್ವೇಷ ಭಾಷಣದ ಪ್ರಕರಣ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.ಈ ಪ್ರಕರಣದಲ್ಲಿ ಈಗಾಗಲೇ ಕೆಲವು ಹಿಂದೂಗಳು ಅರೆಸ್ಟ್ ಆಗಿದ್ದಾರೆ. ಆದರೆ ಹಿಂದೂಗಳ ವಿರುದ್ಧ ದ್ವೇಷಪೂರಿತ ಮಾತುಗಳನ್ನ ಆಡಿರೋ ಮುಸ್ಲಿಂ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ.
ಹೌದು.ಹಿಂದೂಗಳು ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡುತ್ತಾರೆ ಸರಿ. ಆದರೆ ಅಸಾಸುದ್ದೀನ್ ಓವೈಸಿ ಮತ್ತು ವಾರಿಸ್ ಪಠಾಣರಂತಹ ಮುಸ್ಲಿಮರ ನಾಯಕರು ಹಿಂದೂಗಳ ವಿರುದ್ಧವೇ ದ್ವೇಷಭರಿತ ಭಾಷಣ ಮಾಡುತ್ತಾರೆ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಅಂತಲೇ ಹಿಂದೂ ಸೇನೆ ಮುಖ್ಯಸ್ಥ ವಿಷ್ಣು ಗುಪ್ತಾ ಹೇಳಿದ್ದಾರೆ.
ಹಿಂದೂ ಫ್ರಂಟ್ ಫಾರ್ ಜಸ್ಟೀಸ್ ಅನ್ನೋ ಸಂಘಟನೆ ಸಲ್ಲಿಸಿರೋ ಅರ್ಜಿಯಲ್ಲಿ ಮುಸ್ಲಿಂ ನಾಯಕರು ಹಿಂದೂಗಳ ವಿರುದ್ಧ ಹೇಳಿಕೆ ನೀಡಿರೋ 25 ಘಟನೆಗಳ ಉಲ್ಲೇಖಗಳೂ ಇವೆ.
PublicNext
23/01/2022 09:31 pm