ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇನ್ನೊಂದು ತಿಂಗಳಲ್ಲಿ ಬೊಮ್ಮಾಯಿ ಅಧಿಕಾರ ಹೋಗುತ್ತೆ: ಶಾಪ ಕೊಟ್ಟ ಸ್ವಾಮಿ

ಬೆಳಗಾವಿ: ರಾಜ್ಯ ರಾಜಕೀಯ ಈಗಷ್ಟೇ ಸರಾಗವಾಗಿ ಸಾಗುತ್ತಿದೆ. ಇದರ ಮಧ್ಯೆ ಸ್ವಾಮೀಜಿ ಒಬ್ಬರು ಸಿಎಂ ಬೊಮ್ಮಾಯಿ ಇನ್ನೊಂದು ತಿಂಗಳಲ್ಲಿ ತಮ್ಮ ಅಸ್ತಿತ್ವ ಕಳೆದುಕೊಳ್ಳಲಿದ್ದಾರೆ ನಮ್ಮ ಶಾಪ ತಟ್ಟದೇ ಇರಲ್ಲ ಎಂದು ಶಪಿಸಿದ್ದಾರೆ.ಹೌದು ಸರ್ಕಾರ ಪೊಲೀಸರನ್ನು ಬಿಟ್ಟು ಖಾವಿ ಕುಲಕ್ಕೆ ಅವಮಾನ ಮಾಡಿದೆ ಎಂದು ಕೂಡಲ ಸಂಗಮ ಬಸವ ಧರ್ಮ ಪೀಠದ ಬಸವಪ್ರಕಾಶ ಸ್ವಾಮೀಜಿ ಹಾಗೂ ದಯಾನಂದ ಸ್ವಾಮಿಜಿಗಳು ಸಿಎಂಗೆ ಶಾಪ ಹಾಕಿದ್ದಾರೆ.

ಸುವರ್ಣ ಗಾರ್ಡನ್ ಟೆಂಟ್ ಬಳಿ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ಕೈಬಿಡಬೇಕೆಂದು ಬಸವ ದಳ, ಸಸ್ಯಹಾರಿ ಸಂಘಟನೆ ಒಕ್ಕೂಟದಿಂದ ಪ್ರತಿಭಟನೆ ಮಾಡಲಾಯಿತು. ಅನೇಕ ಸ್ವಾಮಿಜಿಗಳು, ಮಾತೆಯರು ಸರ್ಕಾರದ ನಿರ್ಧಾರ ವಿರುದ್ಧ ಪ್ರತಿಭಟಿಸಿದರು. ಬೆಳಗ್ಗೆಯಿಂದ ಸಾಯಂಕಾಲವರೆಗೆ ಟೆಂಟ್ ಬಳಿ ಯಾರೂ ಬರಲಿಲ್ಲ. ನಮ್ಮ ಆಹವಾಲನ್ನು ಸ್ವೀಕರಿಸಲಿಲ್ಲ ಎಂದು ಆಕ್ರೋಶಕ್ಕೊಳಗಾದರು. ಈ ಸಂದರ್ಭದಲ್ಲಿ ಸುವರ್ಣ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು ಹೊರಟ ವೇಳೆ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆಯಲು ಮುಂದಾದರು. ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಈ ವೇಳೆ ಆಕ್ರೋಶಗೊಂಡ ಬಸವಪ್ರಕಾಶ ಸ್ವಾಮೀಜಿ ಹಾಗೂ ದಯಾನಂದ ಸ್ವಾಮೀಜಿ ಸರ್ಕಾರದ ವಿರುದ್ಧ ಹರಿಹಾಯ್ದ ಶಾಪ ಹಾಕಿದರು. ಈ ಅನ್ಯಾಯವನ್ನು ಲಿಂಗಾಯತ ಸಮುದಾಯ ಸಹಿಸಿಕೊಳ್ಳುವುದಿಲ್ಲ ಸ್ವಾಮೀಜಿಗಳನ್ನು, ಲಿಂಗನಿಷ್ಠರನ್ನು ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಎಂದು ಸ್ವಾಮಿಜಿಗಳು ಆಕ್ರೋಶ ವ್ಯಕ್ತಪಡಿಸಿದರು.

Edited By : Nirmala Aralikatti
PublicNext

PublicNext

21/12/2021 04:01 pm

Cinque Terre

45.46 K

Cinque Terre

23