ಬೆಳಗಾವಿ: ಮತಾಂತರ ನಿಷೇಧ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿ ಮಸೂದೆ ಪಾಸ್ ಮಾಡಿದ್ರೆ 2023ಕ್ಕೆ ನಾವೇ ಅಧಿಕಾರಕ್ಕೆ ಬರ್ತೀವಿ ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸದಿರುವಂತೆ ಒತ್ತಾಯಿಸಿ ಸುವರ್ಣ ಸೌಧ ಪಕ್ಕದ ಸುವರ್ಣ ಗಾರ್ಡನ್‌ನಲ್ಲಿ ಭಾರತೀಯ ಕ್ರೈಸ್ತ ಒಕ್ಕೂಟ ಸಾಂಕೇತಿಕ ಉಪವಾಸ ಹೋರಾಟ ಹಮ್ಮಿಕೊಂಡಿದೆ. ಈ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷ ಮತಾಂತರ ನಿಷೇಧ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸುತ್ತದೆ. ಒಂದು ಧರ್ಮವನ್ನು ಗುರಿಯಾಗಿಸಿಕೊಂಡು ಮಸೂದೆ ಜಾರಿಗೊಳಿಸಲು ಸರ್ಕಾರ ಹೊರಟಿದೆ. ಈ ಮೂಲಕ ಕೋಮು ಸೌಹಾರ್ದವನ್ನು ಒಡೆಯಲು ಮುಂದಾಗುತ್ತಿದೆ. ಈ ಮಸೂದೆಯಲ್ಲಿ ರಾಜ್ಯದ ಜನರ ಹಿತದ ಉದ್ದೇಶವಿಲ್ಲ. ನಾವು ಎಂದಿಗೂ ಕ್ರೈಸ್ತ ಸಮುದಾಯದೊಂದಿಗೆ ಇದ್ದೇವೆ. ಈ ಮಸೂದೆ ಜಾರಿಯಾದರೆ 2023ಕ್ಕೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಸಿದ್ದರಾಮಯ್ಯ ರಾಜ್ಯ ಸರ್ಕಾರದ ಮೇಲೆ ಗುಡುಗಿದ್ದಾರೆ.
PublicNext
17/12/2021 11:02 pm