ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಶಿಯಲ್ಲಿರುವುದು ಏಕೈಕ ಸರ್ಕಾರ.. ಅದು ಶಿವನ ಸರ್ಕಾರ…

ವಾರಣಾಸಿ: ವಾರಾಣಸಿಯಲ್ಲಿ ಇಂದು ಪ್ರಧಾನಿ ಮೋದಿ ಕಾಶಿ ವಿಶ್ವನಾಥ ಕಾರಿಡಾರ್ ಗೆ ಚಾಲನೆ ನೀಡಿ ಬಳಿಕ ಮಾತನಾಡಿ, ಕಾಶಿ ಸಂವೇದನೆಯ ಸೃಷ್ಟಿ, ಕಾಶಿ ಎಂದರೆ ಇಲ್ಲಿ ಮೃತ್ಯು ಕೂಡ ಮಂಗಳವೇ, ಕಾಶಿಯಲ್ಲಿ ಸತ್ಯವೇ ಸಂಸ್ಕಾರ, ಕಾಶಿಯಲ್ಲಿ ಪ್ರೇಮವೇ ಪರಂಪರೆ ಎಂದರು.

ನಾಲ್ಕು ಜೈನ ತೀರ್ಥಂಕರರ ಜನ್ಮಭೂಮಿಯಾಗಿರುವ ಕಾಶಿಯಲ್ಲಿ ಇಲ್ಲಿಯವರೆಗೆ ಆಗಿ ಹೋಗಿರುವ ಹಲವಾರು ಮಹನೀಯರ ಬಗ್ಗೆ ಮೋದಿ ಪ್ರಸ್ತಾಪಿಸಿದರು. ಕಾಶಿ ಎಂದರೆ ಅವಿನಾಶಿನಿ. ಇಲ್ಲಿ ಇರುವುದು ಒಂದೇ ಸರ್ಕಾರ, ಅದು ಶಿವನ ಸರ್ಕಾರ. ಇಲ್ಲಿ ಯಾರೇ ಬರಬೇಕು ಎಂದರೂ ಶಿವನ ಅನುಗ್ರಹ ಆಗಬೇಕು. ಅಂಥದ್ದೊಂದು ಪುಣ್ಯಭೂಮಿಯಲ್ಲಿ ಇಂಥದ್ದೊಂದು ಕೆಲಸ ಮಾಡುವ ಅವಕಾಶ ನಮ್ಮ ಸರ್ಕಾರಕ್ಕೆ ಸಿಕ್ಕಿರುವುದು ನಮ್ಮ ಪುಣ್ಯ ಎಂದರು.

ಕೊರೊನಾದಂಥ ಕಾಲದಲ್ಲಿಯೂ ಕಾರಿಡಾರ್ ನಿರ್ಮಾಣಕ್ಕೆ ಹಗಲು ರಾತ್ರಿ ಶ್ರಮಿಸಿದ ಕಾರ್ಮಿಕರು, ಇಂಜಿನಿಯರ್ ಸೇರಿದಂತೆ ಎಲ್ಲಾ ರೀತಿಯ ಕೆಲಸಗಾರರನ್ನು ಭೇಟಿ ಮಾಡಿ ಅವರಿಗೆ ಅಭಿನಂದನೆ ಸಲ್ಲಿಸಿದರು.

Edited By : Nirmala Aralikatti
PublicNext

PublicNext

13/12/2021 06:12 pm

Cinque Terre

49.19 K

Cinque Terre

0

ಸಂಬಂಧಿತ ಸುದ್ದಿ