ಕಾಶಿಯಲ್ಲಿ ಬರೋಬ್ಬರಿ 800 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಾರಿಡಾರ್ ನ್ನು ಇಂದು ಪ್ರಧಾನಿ ಮೋದಿ ಉದ್ಘಾಟಿಸಿದರು. ಒಟ್ಟು ಕಾರಿಡಾರ್ 5 ಲಕ್ಷ ಚದರ ಅಡಿ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ. ಈ ಮೊದಲು ಗಂಗಾನದಿ ಘಾಟ್ನಿಂದ ನೇರವಾಗಿ ದೇವಾಲಯಕ್ಕೆ ಬರಲು ಕಿರಿದಾದ ರಸ್ತೆಯಲ್ಲಿ ಭಕ್ತರು ತೆರಳಬೇಕಿತ್ತು. ಸದ್ಯ ಈಗ ಕಾಶಿ ದೇಗುಲಕ್ಕೆ ವಿಶಾಲವಾದ ಕಾರಿಡಾರ್ ನಿರ್ಮಾಣ ಮಾಡಲಾಗಿದೆ. ದೇವಾಲಯ ಪ್ರವೇಶಕ್ಕೆ ದೊಡ್ಡ ಬಾಗಿಲು ನಿರ್ಮಿಸಿದ್ದು, ದೇವಾಲಯದ ಒಳಭಾಗ ಕೂಡ ಮರು ನಿರ್ಮಾಣ ಮಾಡಲಾಗಿದೆ.
ಕಾಶಿ ಕಾರಿಡಾರ್ ನಲ್ಲಿ ಸ್ವಚ್ಛತೆ, ಭದ್ರತೆಗೆ ಹೆಚ್ಚು ಒತ್ತು ನೀಡಲಾಗಿದೆ. ಟ್ರಾಫಿಕ್ ಜಾಮ್ ಆಗದಂತೆ ರಸ್ತೆ ನಿರ್ಮಾಣ ಮಾಡಲಾಗಿದ್ದು 2ನೇ ಹಂತದ ಕಾಮಗಾರಿ ಮುಂದಿನ ವರ್ಷ ಪೂರ್ಣ ಪೂರ್ಣಗೊಳ್ಳಲಿದೆ. 7 ಭವ್ಯ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದೆ. ಫುಡ್ ಕೋರ್ಟ್, ವೈದಿಕ ಸೇರಿದಂತೆ ಆಧ್ಯಾತ್ಮಿಕ ಗ್ರಂಥಾಲಯವನ್ನ ಸ್ಥಾಪಿಸಲಾಗಿದೆ. ಜೊತೆಯಲ್ಲಿ ಮೋಕ್ಷ ಗೃಹ ಹಾಗೂ ಗೋಡೋಲಿಯಾ ಗೇಟ್ ಮತ್ತು ಭೋಗಶಾಲಾ ಕೂಡ ತಲೆ ಎತ್ತಿವೆ. ಕಾರಿಡಾರ್ ಉದ್ದಕ್ಕೂ ಭಕ್ತರಿಗಾಗಿ ವಿಶೇಷ ಸ್ಕೈ ಬೀಮ್ ಲೈಟ್ ವ್ಯವಸ್ಥೆಯನ್ನೂ ಮಾಡಲಾಗಿದೆ.
PublicNext
13/12/2021 02:12 pm