ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಚಮಸಾಲಿ ಜನಾಂಗ ಒಡೆಯುವ ಹುನ್ನಾರ ಚೆನ್ನಮ್ಮ ಕಾಲದಿಂದಲೂ ನಡೆದು ಬಂದಿದೆ

ವಿಜಯಪುರ: ಚೆನ್ನಮ್ಮ ಕಾಲದಿಂದಲೂ ಪಂಚಮಸಾಲಿ ಜನಾಂಗ ಒಡೆಯುವ ಹುನ್ನಾರ ನಡೆದಿದೆ. ಆದರೆ ಒಡೆಯುವವರ ಉದ್ದೇಶ ಎಂದಿಗೂ ಈಡೇರದು. ಯಾರು ಸಮುದಾಯಕ್ಕಾಗಿ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ ಎಂಬುದು ಸಮುದಾಯದ ಜನರಿಗೆ ಗೊತ್ತಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಜಯ ಬಸವಮೃತ್ಯುಂಜಯ ಶ್ರೀಗಳು ಹೇಳಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದೀಗ ಹೋರಾಟದ ಮೂಲಕ ಮತ್ತೆ ಸಮಾಜ ಕಟ್ಟುತ್ತಿದ್ದೇವೆ. ಇದಕ್ಕಾಗಿ ಪಂಚಮಸಾಲಿ ಜನಾಂಗ ಒಡೆಯಲು ಬಿಡೋದಿಲ್ಲ. ನಾವು ಬೆವರು ಸುರಿಸಿ ದುಡಿಯುತ್ತಿದ್ದೇವೆ.

ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕಾಣದ ಕೈಗಳಂತೆ ಸಮಾಜ ಒಡೆಯುವ ಹುನ್ನಾರ ಮಾಡಿದೆ. ಆದರೆ ನನ್ನ ಹೋರಾಟ ಮಾತ್ರ ಪಂಚಮಸಾಲಿ 2ಎ ಮೀಸಲಾತಿಗಾಗಿ ಎಂದು ಬಸವಜಯ ಮೃತ್ಯುಂಜಯ ಸ್ವಾಮಿಜಿ ಹೇಳಿದ್ದಾರೆ.

Edited By : Nagesh Gaonkar
PublicNext

PublicNext

06/12/2021 04:49 pm

Cinque Terre

43.47 K

Cinque Terre

2

ಸಂಬಂಧಿತ ಸುದ್ದಿ