ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಂದಿನ ಸರ್ಕಾರಗಳ ಅವಧಿಯಲ್ಲಿ ತೆರಿಗೆ ಹಣ ಖಬರ್‌ಸ್ಥಾನ್‌ಗೆ ಹೋಗುತ್ತಿತ್ತು: ಯೋಗಿ ಆದಿತ್ಯನಾಥ್

ಅಯೋಧ್ಯೆ: ಹಿಂದಿನ ಸರ್ಕಾರಗಳ ಅವಧಿಯಲ್ಲಿ ಉತ್ತರ ಪ್ರದೇಶದಲ್ಲಿ ಜನರ ತೆರಿಗೆ ಹಣವನ್ನು ಖಬರ್‌ಸ್ಥಾನಕ್ಕೆ ಬಳಕೆ ಮಾಡಲಾಗುತ್ತಿತ್ತು. ಆದರೆ ಈಗ ದೇವಸ್ಥಾನಗಳಿಗೆ ಬಳಸಲಾಗುತ್ತಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಆಯೋಜಿಸಲಾಗಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2017ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಗುಲಗಳ ಮರು ಅಭಿವೃದ್ಧಿಗೆ ಈ ಹಣವನ್ನು ಬಳಕೆ ಮಾಡಲಾಗುತ್ತಿದೆ ಎಂದಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಕೇಂದ್ರ ಸರಕಾರದಿಂದಲೂ ವಿವಿಧ ರೀತಿಯ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಅದರ ಮೂಲಕ ರಾಜ್ಯದಲ್ಲಿ 500 ದೇಗುಲಗಳು ಮತ್ತು ಇತರ ಧಾರ್ಮಿಕ ಕ್ಷೇತ್ರಗಳು ಜೀರ್ಣೋದ್ಧಾರ ಆಗುತ್ತಿವೆ ಎಂದು ಪ್ರಕಟಿಸಿದರು. ರಾಮ ಮಂದಿರ ನಿರ್ಮಾಣಕ್ಕೆ ಮೊದಲ ಮೂವತ್ತು ವರ್ಷಗಳಲ್ಲಿ ಜೈ ಶ್ರೀ ರಾಮ್‌ ಎಂಬ ಘೋಷಣೆ ಕೂಗುವುದು ಕೂಡ ಅಪರಾಧವಾಗಿತ್ತು ಎಂದರು.

Edited By : Nagaraj Tulugeri
PublicNext

PublicNext

05/11/2021 07:53 am

Cinque Terre

51.06 K

Cinque Terre

72

ಸಂಬಂಧಿತ ಸುದ್ದಿ