ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಪಚುನಾವಣೆ ಒಳಗಾಗಿ ಮೀಸಲಾತಿ ವರದಿ ತರಿಸಿಕೊಳ್ಳಿ: ಸ್ವಾಮೀಜಿ ಒತ್ತಾಯ

ಬೆಂಗಳೂರು: ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಉಪ ಚುನಾವಣೆಯ ಮತದಾನಕ್ಕೂ ಮುನ್ನವೇ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ '2ಎ' ಮೀಸಲಾತಿ ನೀಡುವ ಕುರಿತು ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ತರಿಸಿಕೊಳ್ಳಿ ಎಂದು ಕೂಡಲಸಂಗಮ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ನಾವು ಸರ್ಕಾರದ ಮೇಲೆ ಯಾವುದೇ ರಾಜಕೀಯ ಒತ್ತಡ ಹೇರುತ್ತಿಲ್ಲ. ನಮ್ಮ ಸಮುದಾಯದ ಬೇಡಿಕೆ ಏನಿದೆಯೋ ಅದನ್ನಷ್ಟೇ ಸರ್ಕಾರದ ಮೇಲೆ ಇಟ್ಟಿದ್ದೇವೆ. ಅಕ್ಟೋಬರ್ 30ರಂದು ಉಪಚುನಾವಣೆ ಮತದಾನ ನಡೆಯಲಿದೆ. ಅಷ್ಟರೊಳಗಾಗಿ ಸರ್ಕಾರ ಆಯೋಗದಿಂದ ವರದಿ ತರಿಸಿಕೊಳ್ಳಬೇಕು ಎಂದು ಶ್ರೀಗಳು ಒತ್ತಾಯಿಸಿದ್ದಾರೆ. ಹಾನಗಲ್ ಕ್ಷೇತ್ರದಲ್ಲಿ ಸುಮಾರು 46 ಸಾವಿರ ಮತ್ತು ಸಿಂದಗಿಯಲ್ಲಿ ಸುಮಾರು 36 ಸಾವಿರ ಪಂಚಮಸಾಲಿ ಸಮುದಾಯದ ಮತದಾರರಿದ್ದಾರೆ. ಹಾನಗಲ್‌ನಲ್ಲಿ ನಮ್ಮ ಸಮುದಾಯಕ್ಕೆ ಬಿಜೆಪಿ ಟಿಕೆಟ್ ನೀಡಿಲ್ಲ. ಮುಖ್ಯಮಂತ್ರಿ ಹುದ್ದೆ ಸಹ ಸಮುದಾಯಕ್ಕೆ ನೀಡಿಲ್ಲ. ಹೀಗಾಗಿ ಸಮುದಾಯದಲ್ಲಿ ಅಸಮಾಧಾನವಾಗಿದೆ ಎಂದರು. ಮೀಸಲಾತಿಗಾಗಿ ಹೋರಾಟ ಮುಂದುವರಿಯಲಿದ್ದು, ಈಗಾಗಲೇ ಅ.13ರಿಂದ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಆರಂಭಿಸಲಾಗಿದೆ. 2022ರ ಜನವರಿ 14ರವರೆಗೆ ಈ ಅಭಿಯಾನ ನಡೆಯಲಿದೆ ಎಂದರು.

Edited By : Nagaraj Tulugeri
PublicNext

PublicNext

21/10/2021 04:02 pm

Cinque Terre

41.45 K

Cinque Terre

9

ಸಂಬಂಧಿತ ಸುದ್ದಿ