ಹುಬ್ಬಳ್ಳಿ: ಸರ್ಕಾರ ಮೈಸೂರಿನಲ್ಲಿ ದೇವಸ್ಥಾನ ತೆರವು ಮಾಡುತ್ತಿರುವದು ಅತ್ಯಂತ ಹೇಯ ಕೃತ್ಯ, ಇದನ್ನು ನಾನು ಖಂಡಿಸುತ್ತೇನೆ,
ವಿರೋಧಿಸುತ್ತೇನೆ ಹಾಗೂ ದೇವಸ್ಥಾನ ತೆರವು ವಿಚಾರದಲ್ಲಿ ತಾರತಮ್ಯ ಬೇಡ ಎಲ್ಲ ಮತಧರ್ಮಗಳ ಮಂದಿರಗಳ ಮೇಲೂ ಕಾನೂನು ಕ್ರಮವಾಗಲಿ ಎಂದು ಜಗದ್ಗುರು ಶ್ರೀ ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು ಹೇಳಿದರು.
ನಗರದ ವಿದ್ಯಾನಗರದ ರಂಭಾಪುರಿ ಸಮುದಾಯ ಭವನದಲ್ಲಿ ಮಾತನಾಡಿದ ಅವರು.ದೇವಸ್ಥಾನ ಕಲ್ಲಿನ ಹಾಗೂ ಸಿಮೆಂಟಿನ ಕಟ್ಟಡ ಮಾತ್ರ ಅಲ್ಲ, ಭಾವ, ಭಕ್ತಿಯ ಮಂದಿರ. ಯಾವುದೇ ರೀತಿಯ ಸೂಚನೆ ಇಲ್ಲದೇ, ಸಮಾಲೋಚನೆ ಇಲ್ಲದೇ ರಾತ್ರೋ ರಾತ್ರಿ ದೇವಸ್ಥಾನ ಕೆಡವುವುದು ಅತ್ಯಂತ ಖಂಡನೀಯ. ಸರ್ಕಾರ ದೇವಾಲಯ ತೆರವು ವಿಚಾರದಲ್ಲಿ ಸದನದಲ್ಲಿ ಸ್ಪಷ್ಟನೆ ನೀಡಿದೆ ಅದಕ್ಕೆ ನಮ್ಮ ಸಹಮತ ಸಹ ಇದೆ. ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದರು.
PublicNext
25/09/2021 01:48 pm