ಮೂಡುಬಿದಿರೆ: ದೇವಸ್ಥಾನ ಸಂರಕ್ಷಣೆ, ಧರ್ಮ ರಕ್ಷಣೆಗೋಸ್ಕರ ಇರುವ ಪಕ್ಷ ಬಿಜೆಪಿ. ಪಕ್ಷದ ಸಭೆ ಹಾಗೂ ಶಾಸಕಾಂಗ ಸಭೆಯಲ್ಲಿ ದೇವಾಲಗಳನ್ನು ಉಳಿಸಲು ಬೇಕಿರುವ ಕಾನೂನು ಹೋರಾಟಗಳ ಬಗ್ಗೆ ತೀರ್ಮಾನ ಮಾಡಿದ್ದೇವೆ.ಇನ್ನು ಯಾವುದೇ ದೇವಸ್ಥಾನಗಳನ್ನು ಕೆಡವುವ ಪ್ರಶ್ನೇಯೇ ಇಲ್ಲ. ದೇವಸ್ಥಾನಗಳ ಸಂರಕ್ಷಣೆಗೆ ಸರ್ಕಾರ ಬದ್ಧವಿದೆ ಎಂದು ಬಿಜೆಪಿ ರಾಜ್ಯಾಧ್ಯಾಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ವಿದ್ಯಾಗಿರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನಗಳನ್ನು ಕೆಡುವುದರ ಹಿಂದೆ ಅಧಿಕಾರಿಗಳ ಕ್ರಮ ತಪ್ಪಾಗಿದೆ. ಕೆಡವಲಾದ ದೇವಸ್ಥಾನಗಳ ಪುನರ್ ನಿರ್ಮಾಣ ಮಾಡಲು ಸರ್ಕಾರ ಚಿಂತನೆ ಮಾಡಿದೆ ಎಂದರು.
PublicNext
17/09/2021 03:26 pm