ಉಡುಪಿ: ಬಿಜೆಯವರು ದೇವಸ್ಥಾನ ಹುಡಿ ಮಾಡಿದರೆ ಅದು ದೊಡ್ಡ ವಿಷಯವೇ ಅಲ್ಲ.ಬಿಜೆಪಿಯವರು ಹಿಂದುತ್ವವನ್ನು ಗುತ್ತಿಗೆಗೆ ತೆಗೆದುಕೊಂಡಿದ್ದಾರೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಮೂಡನಂಬಿಕೆ ಬಿಲ್ ತರುತ್ತೇವೆ ಅಂದಾಗ ದೊಡ್ಡ ಅಪಪ್ರಚಾರ ಮಾಡಿದರು.ದೇಗುಲದ ಘಂಟೆ ಬಾರಿಸುವುದಕ್ಕೆ ಇಲ್ಲ, ಭೂತಾರಾಧನೆ ನಿಲ್ಲುತ್ತೆ, ತುಳಸಿ ಕಟ್ಟ ತೆಗೆಯುತ್ತಾರೆ ಅಂತ ಅಪಪ್ರಚಾರ ಮಾಡಿದರು.
ಆದ್ರೆ, ಯಡಿಯೂರಪ್ಪ ಬಂದಾಗ ಅದೇ ಮಸೂದೆಯನ್ನು ಅಕ್ಷರ ಕೂಡ ಬದಲಾವಣೆ ಮಾಡದೇ ಜಾರಿಗೆ ತಂದರು.ಬಿಜೆಪಿಯವರು ಯಾವುದೇ ಕೆಲಸ ಮಾಡಿದರೂ ಯಾವುದೇ ಆತಂಕ ಇಲ್ಲ.ನಾವೆಲ್ಲರೂ ಹಿಂದುತ್ವದ ಬಗ್ಗೆ ಅವರಲ್ಲಿ ಅನುಮತಿ ತೆಗೆದುಕೊಳ್ಳಬೇಕು.
ಮುಂದಿನ ದಿನ ಇಂತಹ ಕಾನೂನು ಬಂದರೂ ಬರಬಹುದು ಎಂದು ಸೊರಕೆ ಲೇವಡಿ ಮಾಡಿದ್ದಾರೆ.
ಭಕ್ತರ ನಂಬಿಕೆಯನ್ನು ಗಣನೆಗೆ ತೆಗೆದುಕೊಳ್ಳದೇ ಏಕಾಏಕಿ ದೇವಸ್ಥಾನ ಕೆಡವುವುದು ಸರಿ ಅಲ್ಲ ಎಂದು ಉಡುಪಿಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
PublicNext
13/09/2021 02:16 pm