ಬಾಗಲಕೋಟೆ: ಸಿದ್ದರಾಮಯ್ಯ ಅವರನ್ನೂ ಸೇರಿ ಕಾಂಗ್ರೆಸ್ ನಾಯಕರನ್ನು ಪಾಕಿಸ್ತಾನಕ್ಕೆ ಕಳುಹಿಸಿ ಎಂದು ಶ್ರೀರಾಮ ಸೇನೆ ಬಳ್ಳಾರಿ ವಿಭಾಗದ ಅಧ್ಯಕ್ಷ ಸಂಜೀವ ಮರಡಿ ಒತ್ತಾಯಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾದಾಮಿಯಲ್ಲಿನ ಪುರಾತನ ದೇವಾಲಯಗಳ ತೆರವು ವಿಚಾರವಾಗಿ ವಾಗ್ದಾಳಿ ನಡೆಸಿದರು. ಶಾಸಕರ ಕುಮ್ಮಕ್ಕಿನಿಂದ ದೇಗುಲ ಸ್ಥಳಾಂತರಗೊಳಿಸಲು ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.ಸಿದ್ಧರಾಮಯ್ಯನವರೇ, ನಿಮಗೆ ತಾಕತ್ತಿದ್ದರೆ ದೇಗುಲ ಸ್ಥಳಾಂತರಿಸಿ ಎಂದು ಬಾದಾಮಿಯಲ್ಲಿ ಆಗ್ರಹಿಸಿದ್ದೆ. ಪ್ರಮೋದ್ ಮುತಾಲಿಕ್ ಅವರ ನೇತೃತ್ವದಲ್ಲಿ ಹೋರಾಟ ಮಾಡುವುದಾಗಿ ಹೇಳಿದ್ದೆ. ಆದರೆ ಈಗ ಸಿದ್ಧರಾಮಯ್ಯನವರ ಬೆಂಬಲಿಗರು ಕರೆ ಮಾಡಿ ಧಮ್ಕಿ ಹಾಕುತ್ತಿದ್ದಾರೆ. ಜೀವ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ, ಅವರನ್ನು ಪಾಕಿಸ್ತಾನಕ್ಕೆ ಕಳಿಸಿದರೆ ಇಲ್ಲಿ ಶ್ರೀರಾಮ, ಲಕ್ಷ್ಮಣ, ಆಂಜನೇಯ ಸೇರಿದಂತೆ ಮೂನ್ನೂರು ಕೋಟಿ ದೇವತೆಗಳು ಇರುತ್ತಾರೆ ಎಂದು ಖಾರವಾಗಿ ಹೇಳಿದ್ದಾರೆ.
PublicNext
27/08/2021 09:17 pm