ಚಿಕ್ಕಬಳ್ಳಾಪುರ: ಹಿಂದೊಮ್ಮೆ ಪುಟ್ಟಪರ್ತಿಯಲ್ಲಿ ಸತ್ಯಸಾಯಿ ದರ್ಶನ ಮಾಡಿ ಪುಸ್ತಕವೊಂದನ್ನು ಖರೀಸಿದ್ದೆ. ಅದರಲ್ಲಿನ ಬಾಬಾರ ಸಂದೇಶ ಓದಿ ಅಂದೇ ಮಾಂಸಾಹಾರ ಬಿಟ್ಟಿದ್ದೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಶ್ರೀ ಸತ್ಯಸಾಯಿ ಸರಳ ಮೆಮೋರಿಯಲ್ ಆಸ್ಪತ್ರೆ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ತಾವು ಮಾಂಸಾಹಾರ ತ್ಯಜಿಸಿದ ಸಂದರ್ಭ ವಿವರಿಸಿದ್ದಾರೆ. ನಾನು 1998 ರಲ್ಲಿ ವೈಟ್ ಫೀಲ್ಡ್ ನಲ್ಲಿ ಸತ್ಯಸಾಯಿ ದರ್ಶನ ಪಡಿದಿದ್ದೆ. ಆಗ ಭಕ್ತರೊಬ್ಬರು ಎರಡು ಗಂಟೆಗಳ ಕಾಲ ಪುಸ್ತಕ ಒದುತ್ತಿದ್ದರು. ನಾನು ಸಹ ಆ ಪುಸ್ತಕ ಒದಿದೆ. ಅದರಲ್ಲಿ ಮಾಂಸಾಹಾರ , ಸಸ್ಯಾಹಾರ ಹಾಗೂ ವೈಜ್ಞಾನಿಕತೆ, ಅಧ್ಯಾತ್ಮಿಕತೆ ಬರೆಯಲಾಗಿತ್ತು. ಆ ಪುಸ್ತಕವನ್ನು ಓದಿ, ಆಗಲೇ ನಾನು ಮಾಂಸಾಹಾರ ತ್ಯಜಿಸಿದೆ. ಅದರಲ್ಲಿ ಬಾಬಾರ ಸಂದೇಶವಿತ್ತು. ಹೀಗಾಗಿ ನಾನು ನಾನ್ ವೆಜ್ ಬಿಟ್ಟೆ ಎಂದು ತಿಳಿಸಿದರು.
PublicNext
27/08/2021 09:06 pm