ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಕ್ರಾಂತಿಯ ಮುನ್ನ ದೇಶದಲ್ಲಿ ದೊಡ್ಡ ಅವಘಡ ಸಂಭವಿಸಲಿದೆ: ಕೋಡಿ ಶ್ರೀಗಳ ಭವಿಷ್ಯ

ಕೋಲಾರ: ಮುಂದಿನ ಸಂಕ್ರಾಂತಿ ಒಳಗೆ ದೇಶದಲ್ಲಿ ದೊಡ್ಡ ಅವಘಡ ಸಂಭವಿಸಲಿದೆ ಎಂದು ಕೋಡಿ ಮಠದ ಶ್ರೀ ಶಿವಾನಂದ ಸ್ವಾಮೀಜಿ ಭವಿಷ್ಯ ನುಡಿದರು.

ಕೋಲಾರ ತಾಲೂಕಿನ ಲಕ್ಷ್ಮೀ ಸಾಗರ ಗ್ರಾಮದಲ್ಲಿ ಮಾತನಾಡಿದ ಅವರು, ಸಂಕ್ರಾಂತಿಯೊಳಗೆ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಅವಘಡ ಸಂಭವಿಸಲಿದೆ ಎಂದು ಹೇಳಿದ್ದಾರೆ.

ಕೇಂದ್ರದ ನಾಯಕರು ರಾಜ್ಯದ ಮಠಾಧೀಶರಿಗೆ ಅಗೌರವ ತೋರಿದ್ದಾರೆ. ರಾಜ್ಯಕ್ಕೆ ಬಂದು ನಮ್ಮ ಬೇಡಿಕೆಗಳನ್ನು ಆಲಿಸಬಹುದಿತ್ತು. ಗುರು ಪರಂಪರೆಗೆ ಮಹಾರಾಜರ ಕಾಲದಿಂದಲೂ ಮಾನ್ಯತೆ ಇದೆ. ಮಠಾಧೀಶರು ರಾಜಕಾರಣ ಮಾಡಿಲ್ಲ. ಬದಲಾಗಿ ಮುಖ್ಯಮಂತ್ರಿ ಬದಲಾಯಿಸುವ ಸಂದರ್ಭ ಇದಲ್ಲ ಎಂದಿದ್ದರು. ಆದರೆ ಹೈಕಮಾಂಡ್ ಗುರುಗಳನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Edited By : Nagaraj Tulugeri
PublicNext

PublicNext

31/07/2021 07:20 am

Cinque Terre

44.84 K

Cinque Terre

12

ಸಂಬಂಧಿತ ಸುದ್ದಿ