ಬೆಂಗಳೂರು: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀರಾಮ ಮಂದಿರಕ್ಕೆ ದೇಶಾದ್ಯಂತ ದೇಣಿಗೆ ಹರಿದು ಬರುತ್ತಿದೆ. ಈ ಅಭಿಯಾನದಲ್ಲಿ ಬೆಂಗಳೂರು ನಗರದ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಿಂದ ಸುಮಾರು 6.01 ಕೋಟಿ ರೂ. ದಾಖಲೆ ಮೊತ್ತದ ಹಣ ಸಂಗ್ರಹವಾಗಿದೆ.
ಕೆ.ಆರ್.ಪುರಂ ಶಾಸಕ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಸ್ವಇಚ್ಛೆಯಿಂದ 51 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಅವರ ಕ್ಷೇತ್ರದಲ್ಲಿ ನಡೆಸಿದ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಅಭಿಯಾನದಲ್ಲಿ ಸುಮಾರು 5.50 ಕೋಟಿ ರೂ. ಸಂಗ್ರಹವಾಗಿದೆ. ಈ ಮೂಲಕ ಒಟ್ಟು ಮೊತ್ತವು 6.01 ಕೋಟಿ ರೂ. ಆಗಿದೆ. ಇದು ರಾಜ್ಯದ 224 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆ.ಆರ್.ಪುರಂನಲ್ಲಿ ಅತಿ ಹೆಚ್ಚು ಸಂಗ್ರಹವಾದ ದೇಣಿಗೆ ಹಣ ಎನ್ನಲಾಗಿದೆ.
PublicNext
17/02/2021 10:49 am