ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ ಗಡ್ಡಕ್ಕೂ ರಾಮ ಮಂದಿರಕ್ಕೂ ದೀಕ್ಷಾ ಸಂಬಂಧ

ಬಾಗಲಕೋಟೆ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗುವವರೆಗೂ ಪ್ರಧಾನಿ ನರೇಂದ್ರ ಮೋದಿ ಅವರು ಗಡ್ಡ ತೆಗೆಯೋದಿಲ್ವಾ ಎಂಬ ಊಹಾಪೋಹಕ್ಕೆ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಮ್ಮ ಅಭಿಪ್ರಾಯ ಹೇಳಿದ್ದಾರೆ.

ಬಾಗಲಕೋಟೆಗೆ ಆಗಮಿಸಿದ್ದ ಉಡುಪಿ ಪೇಜಾವರ ಮಠದ ಸ್ವಾಮೀಜಿ ಮೋದಿ ಗಡ್ಡದ ಬಗ್ಗೆ ಒಂದಿಷ್ಟು ವಿಚಾರಗಳನ್ನು ಮಾತಾಡಿದ್ದಾರೆ. ನಮ್ಮಲ್ಲಿ ದೇವಸ್ಥಾನದ ಕಾರ್ಯ ಇಂತದ್ದೆಲ್ಲ ಇರುತ್ತೆ. ಆ ಹೊತ್ತಿಗೆ ನಾವು ದೀಕ್ಷಾ ಬದ್ಧರಗೋದು ಅಂತ ಇದೆ. ಅದೇ ರೀತಿ ಮೋದಿ ಅವರು ರಾಮಮಂದಿರ ಕಾರ್ಯಕ್ಕಾಗಿ ದೀಕ್ಷೆ ತೊಟ್ಟಿದ್ದಾರೆಂದು ಊಹಿಸಿದರು.

ಸ್ವತಃ ಮೋದಿ ಅವರೇ ರಾಮಲಲ್ಲಾ ದೇವಸ್ಥಾನದ ಶಿಲಾನ್ಯಾಸ ನೆರವೇರಿಸಿದ್ದಾರೆ. ಮಂದಿರದ ಸಂಪೂರ್ಣ ಜವಾಬ್ದಾರಿಯನ್ನ ಮೋದಿಯವರು ಹೊತ್ತಿದ್ದರಿಂದ ಸಹಜವಾಗಿ ಇಂತಹ ಕಾರ್ಯಗಳಲ್ಲಿ ಕೇಶಾದಿಗಳನ್ನು ತೆಗೆಯೋದಿಲ್ಲ. ನೈತಿಕ ನೆಲೆಯಲ್ಲಿ ನಮ್ಮಲ್ಲಿ ಮಂದಿರ ಆಗುವ ತನಕ ಗಡ್ದ ತಲೆಗೂದಲು ಬಿಟ್ಟಿರುತ್ತೇವೆ. ಪ್ರಾಯಶಃ ಮೋದಿಯವರು ಕೂಡ ಇದನ್ನು ಪಾಲಿಸಿರಬಹುದು. ಇದರಲ್ಲಿ ಏನೂ ತಪ್ಪಿಲ್ಲ ಎಂದು ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ

Edited By : Nagaraj Tulugeri
PublicNext

PublicNext

28/12/2020 12:34 pm

Cinque Terre

114.06 K

Cinque Terre

42

ಸಂಬಂಧಿತ ಸುದ್ದಿ