ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ : ಅಮಲಿಹಾಳ ದೇಗುಲ ಪ್ರವೇಶ ಘಟನೆಗೆ DSS, ರಾಮಸೇನಾ ಖಂಡನೆ.!

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಅಮಲಿಹಾಳ, ಹೂವಿನಹಳ್ಳಿಯಲ್ಲಿ ದೇಗುಲ ಪ್ರವೇಶಕ್ಕೆ ನಿರಾಕರಿಸಿದ್ದ ಗ್ರಾಮದ ಸಂಗಣ್ಣಗೌಡ ಹಾಗೂ ಇತರೆ 25ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಕರ್ನಾಟಕ ರಾಜ್ಯ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಒತ್ತಾಯಿಸಿದರು.

ಇನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ ಭದ್ರತೆಯಲ್ಲಿ ದಲಿತ ಮಹಿಳೆಯರು ಆಂಜನೇಯ ದೇವಸ್ಥಾನ ಪ್ರವೇಶಿಸಿ ಪೂಜೆ ಸಲ್ಲಿಸಿದ್ದು, ಒಂದು ವೇಳೆ ಅಧಿಕಾರಿಗಳ ಗಮನಕ್ಕೆ ತರದೇ ದೇಗುಲಕ್ಕೆ ತೆರಳಿದ್ದರೆ ದಲಿತರ ಮೇಲೆ ಸವರಣಿಯರು ಹಲ್ಲೆ ಮಾಡುತ್ತಿದ್ದರು ಎಂದು ಆರೋಪಿಸಿದರು.

ಅಲ್ಲದೇ. ಗ್ರಾಮದಲ್ಲಿ ಅಧಿಕಾರಿಗಳು ಸಭೆ ಮಾಡುವಾಗ ಎರಡು ದಿನಗಳಿಂದ ಸಮಸ್ಯೆ ಮಾಡಿದ ಸಂಗಣ್ಣಗೌಡ ಮತ್ತು 25 ಜನರ ಮೇಲೆ ಕೇಸ್ ಹಾಕಿ ಬಂಧಿಸಬೇಕು ಜತೆಗೆ ದಲಿತರಿಗೆ ಸೂಕ್ತ ರಕ್ಷಣೆ ಕೊಡಬೇಕು ಎಂದು ಒತ್ತಾಯಿಸಿದರು.

ಇನ್ನು ಇತ್ತ ಸುರಪುರ ತಹಶೀಲ್ ಕಚೇರಿ ಮುಂದೆ ಪ್ರತಿಭಟಿಸಿದ ರಾಮಸೇನಾ ಸಂಘಟನೆ ಹಿಂದೂಗಳೆಲ್ಲಾ ಒಂದೇ ಸಮಾಜದಲ್ಲಿ ತಾರತಮ್ಯ ಬೇಡ ಬಸವಣ್ಣನವರ ಆದರ್ಶದಂತೆ ನಡೆಯೋಣ ಅಂತಾ ಜಿಲ್ಲಾಧ್ಯಕ್ಷ ಶರಣು ನಾಯಕ ಡೊಣ್ಣೆಗೇರಾ ಹೇಳಿದರು.

ಇನ್ನು ಅಮಲಿಹಾಳ ಗ್ರಾಮದಲ್ಲಿ ಹಾಗೂ ತಾಲ್ಲೂಕಿನಲಿ ಅಸ್ಪೃಶ್ಯತೆ ಕಂಡು ಬಂದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದರು ಎಚ್ಚರಿಸಿದರು.

ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ

Edited By :
PublicNext

PublicNext

30/05/2022 07:48 pm

Cinque Terre

57.07 K

Cinque Terre

3

ಸಂಬಂಧಿತ ಸುದ್ದಿ