ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವ್ರು ಗುಜರಾತಿ ಭಾಷೆಯಲ್ಲಿ ಬರೆದ ಕವನ ಸಂಕಲ ಈಗ ಇಂಗ್ಲೀಷ್ ಭಾಷೆಗೆ ಅನುವಾದಗೊಂಡಿದ್ದು, ಆಗಸ್ಟ್ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ.
ಪ್ರಧಾನಿ ಮೋದಿ ಬರೆದ ಕವನ ಸಂಕಲನ 2007 ರಲ್ಲಿಯೇ ಪ್ರಕಟಗೊಂಡಿತ್ತು. "ಆಂಖ್‌ಕಾ ಧನ್ಯ ಛೇ" ಹೆಸರಿನಲ್ಲಿಯೇ ಈ ಕವನ ಸಂಕಲನ ಹೊರ ಬಂದಿತ್ತು.
ಇದೇ ಕವನ ಸಂಕಲನವನ್ನ ಪತ್ರಕರ್ತೆ ಹಾಗೂ ಇತಿಹಾಸ ತಜ್ಞೆ ಭಾವನಾ ಸೋಮಯಾ ಅವ್ರು ಇಂಗ್ಲೀಷ್ ಭಾಷೆಗೆ ಅನುವಾದಿಸಿದ್ದಾರೆ. ಇದಕ್ಕೆ ಈಗ "ಲೆಟರ್ಸ್ ಟು ಸೆಲ್ಪ" ಅಂತಲೂ ಹೆಸರಿಟ್ಟಿದ್ದಾರೆ.
ಪ್ರಧಾನಿ ಮೋದಿ ಬರೆದ ಈ ಕವನ ಸಂಕಲನದಲ್ಲಿ ಅನ್ವೇಷಣೆ,ಧೈರ್ಯ,ಹತಾಶೆ,ಪ್ರಗತಿ,ಸಹಾನುಭೂತಿಯಂತಹ ವಿಷಯಗಳ ಮೇಲೆನ ಕವಿತೆಗಳು ಇವೆ.ಫಿಂಗರ್ ಪ್ರಿಂಟ್ಸ್ ಪಬ್ಲಿಷಿಂಗ್ ಸಂಸ್ಥೆ ಈ ಕವನ ಸಂಕಲನವನ್ನ ಹೊರಗೆ ತರುತ್ತಿದೆ.
PublicNext
31/07/2022 09:00 am