ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿ: AIMIM ಬ್ಯಾನ್ ಮಾಡಿ ಸ್ಪೋಟಕ ಹೇಳಿಕೆ

ಹುಬ್ಬಳ್ಳಿ: ದೇಶದಲ್ಲಿ ಅಶಾಂತಿಯನ್ನು ಹುಟ್ಟು ಹಾಕುವ ಎಐಎಂಐಎಂ, ಎಸ್.ಡಿ.ಪಿ.ಐ, ಆರ್.ಎಸ್.ಎಸ್ ಬಜರಂಗದಳ ಎಲ್ಲವನ್ನೂ ಬ್ಯಾನ್ ಮಾಡಿ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸರ್ಕಾರ ಅಶಾಂತಿಯನ್ನುಂಟು ಮಾಡುವ ಯಾವುದೇ ಸಂಘಟನೆಯಾಗಿದ್ದರೂ ಬ್ಯಾನ್ ಮಾಡಲಿ ಅದರಲ್ಲಿ ಎಐಎಂಐಎಂ, ಎಸ್.ಡಿ.ಪಿ.ಐ, ಬಜರಂಗದಳ ಹಾಗೂ ಆರ್.ಎಸ್.ಎಸ್ ಎಲ್ಲವನ್ನೂ ಬ್ಯಾನ್ ಮಾಡಲಿ ಎಂದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ಕುರಿತು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಗೃಹ ಸಚಿವ ಸ್ಥಾನಕ್ಕೆ ಆರಗ ಜ್ಞಾನೇಂದ್ರ ಅನರ್ಹನಾಗಿದ್ದಾನೆ. ನಿಭಾಯಿಸಲು ಆಗದೇ ಇದ್ದರೇ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ. ರಾಜ್ಯಾದಲ್ಲಿ ಗೊಂದಲವನ್ನುಂಟು ಮಾಡುವ ಹೇಳಿಕೆ ನೀಡುವ ಮೂಲಕ ಗೃಹ ಸಚಿವ ಸ್ಥಾನದ ಮರ್ಯಾದೆ ತೆಗೆಯುತ್ತಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಸಿದ್ಧರಾಮಯ್ಯ ಕಿಡಿ ಕಾರಿದ್ದಾರೆ.

40 % ಕಮೀಷನ್ ದಂಧೆಯ ಕುರಿತು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, ಈಗಾಗಲೇ ಈ ಬಗ್ಗೆ ಸಾಕಷ್ಟು ಮಾತನಾಡಿದ್ದೇವೆ. ಈಗ ಜನರ ಕೈಯಲ್ಲಿಯೇ ಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಅವರೇ ತಕ್ಕ ಉತ್ತರವನ್ನು ನೀಡುವ ಮೂಲಕ ಜನರು ಇದಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದು ಅವರು ಹೇಳಿದರು.

ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ಮಾತನಾಡಿದ ಅವರು, ಅಕ್ರಮದಲ್ಲಿ ಯಾರೇ ಭಾಗಿಯಾಗಿದ್ರೂ ಕೂಡಲೇ ಕ್ರಮ‌ ಕೈಗೊಳ್ಳಬೇಕು. ಕಾನೂನಿನ ರಿತ್ಯ ಬಂಧನ ಮಾಡಬೇಕು. ಈ ಘಟನೆ ಜಾಮೀನು ರಹಿತ ಅಫೆನ್ಸ್. ಕೆಲವರಿಗೆ ಬಹಳ ಅನ್ಯಾಯ ಆಗಿದೆ ಎಂದ ಅವರು, ಹುಬ್ಬಳ್ಳಿ ಗಲಭೆಯನ್ನ ಈಗಾಗಲೇ ಖಂಡಿಸಿದ್ದೇನೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ಅಮಾಯಕರ ಮೇಲೆ ಕ್ರಮ ಕೈಗೊಳ್ಳಬೇಡಿ ಎಂದಿದ್ದೇನೆ. ಯಾರೋ ಒಬ್ಬ ಮೌಲ್ವಿ ತಪ್ಪು ಮಾಡಿದ್ದಾರೆ ಅಂತ ಎಲ್ಲರ ವಿಚಾರಣೆ ಸರಿಯಲ್ಲ. ಇದರಿಂದ ಮತ್ತಷ್ಟು ಕೆಸರೆರೆಚುವ ಕೆಲಸ ಆಗುತ್ತದೆ. ಶಾಂತಿ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

Edited By :
PublicNext

PublicNext

22/04/2022 01:55 pm

Cinque Terre

128.85 K

Cinque Terre

20

ಸಂಬಂಧಿತ ಸುದ್ದಿ