ಸೋನಿಯಾ ಗಾಂಧಿ ಇಡಿ ವಿಚಾರ ಸಂಬಂಧ ಕೋಲಾರದಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ನಡೆಸಲಾಯ್ತು.
ಕೋಲಾರ ಕಾಂಗ್ರೆಸ್ ನಲ್ಲಿರುವ ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣಗಳಿಂದ ಪ್ರತ್ಯೇಕವಾಗಿ ನಗರದ ಗಾಂಧಿವನದ ಬಳಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಹೈಡ್ರಾಮ ಸೃಷ್ಟಿ ಮಾಡಿದ್ದರು.
ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಟೀಂನಲ್ಲಿ ಸ್ಥಳೀಯ ನಾಯಕರು ಭಾಗಿಯಾಗಿದ್ರೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಟೀಂನಲ್ಲಿ ಶಾಸಕರಾದ ಎಸ್.ಎನ್ ನಾರಾಯಣಸ್ವಾಮಿ, ನಂಜೇಗೌಡ, ನಜೀರ್ ಅಹಮದ್, ಅನಿಲ್ ಕುಮಾರ್ ಭಾಗಿಯಾಗಿದ್ರು.ಎರಡು ಕಡೆಯವರು ಪ್ರತ್ಯೇಕವಾಗಿ ಮೈಕ್ ಅಳವಡಿಸಿಕೊಂಡು ಭಾಷಣ ಮಾಡಿದ್ರು.
ಸೋನಿಯಾ ಗಾಂಧಿ ವಿಚಾರಕ್ಕಿಂತ ತಮ್ಮ ರಾಜಕೀಯ ಪ್ರತಿಷ್ಠೆಗಾಗಿ ಈ ಪ್ರತಿಭಟನೆಯನ್ನು ಬಳಸಿಕೊಂಡರು.
PublicNext
22/07/2022 04:29 pm