ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನಾನೇ ಮುಂದಿನ ಸಿಎಮ್ ಎಂದು ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಪೈಪೋಟಿ ಇರುವಾಗ ಇವರಿಬ್ಬರ ನಡುವೆ ನಾನೇಕೆ ಬರಲಿ? ಎಂದು ಕಾಂಗ್ರೆಸ್ ಪಕ್ಷದ ನಾಯಕ ಎಂ.ಬಿ ಪಾಟೀಲ ಬೆಳಗಾವಿಯಲ್ಲಿ ಹೇಳಿದರು.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತ್ನಾಡುವ ವೇಳೆ ಎಂ.ಬಿ.ಪಾಟೀಲ್ ಮುಖ್ಯಮಂತ್ರಿ ಆಕಾಂಕ್ಷಿಯಾ ಎಂಬ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಇಬ್ಬರೂ ಮಧ್ಯೆ ನಾನೇಕೆ ಬರಲಿಪಾ? ಎಂ.ಬಿ.ಪಾಟೀಲ್‌ಗೆ ನೇರವಾಗಿ ಬರುವ ಸಾಮರ್ಥ್ಯವಿದೆ. ಪರೋಕ್ಷವಾಗಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಗೆ ಟಾಂಗ್ ನೀಡಿದರು.
ಪಕ್ಷದಲ್ಲಿ ದಲಿತ, ಲಿಂಗಾಯತ, ಒಕ್ಕಲಿಗ ಇನ್ನೀತರ ಸಮುದಾಯದ ನಾಯಕರು ಕೂಡಾ ಸಿಎಮ್ ಆಗಬೇಕೆಂದು ಬಯಸುತ್ತಾರೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು ಅನ್ನೋದ್ನ ಚುನಾವಣಾ ಗೆದ್ದ ಬಳಿಕ ಶಾಸಕರು ಮತ್ತು ಹೈಕಮಾಂಡ್ ನಿರ್ಧಾರ ಮಾಡುತ್ತೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಸಿಎಮ್ ಸ್ಥಾನಕ್ಕೆ ಯಾವುದೇ ಕಿತ್ತಾಟ ಇಲ್ಲ. ಮುಂಬರುವ ಚುನಾವಣೆಯಲ್ಲಿ ಈ ಕೆಟ್ಟ ಬಿಜೆಪಿ ಸರ್ಕಾರ ತೊಲಗಿಸಿ, ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಹುಲ್ ಗಾಂಧಿಯವರು140 ಸೀಟ್ ಟಾರ್ಗೆಟ್ ಕೊಟ್ಟಿದ್ದಾರೆ ಈ ಬಗ್ಗೆ ಅಷ್ಟೇ ಸದ್ಯ ನಮ್ಮ ಪಕ್ಷ ಯೋಚನೆ ಮಾಡುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಇ.ಡಿ ಮತ್ತು ಐಟಿಗಳ ಬಗ್ಗೆ ಭಯವಿಲ್ಲ, ಆದರೆ ಪ್ರಧಾನಿ ಮೋದಿಯವರು ಸ್ವತಂತ್ರ ತನಿಖಾ ಸಂಸ್ಥೆಗಳಾದ ಇಡಿ, ಸಿಬಿಐ, ಐಟಿಗಳನ್ನು ರಾಜಕೀಯ ದುರುದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ದೇಶದಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.
ಇದೆ ವೇಳೆ ಸಿದ್ದರಾಮೊತ್ಸವ ಬಗ್ಗೆ ಮಾತನಾಡಿದ ಅವರು ಸಿದ್ದರಾಮಯ್ಯ ಅವರ 75 ನೇ ಜನ ದಿನಾಚರಣೆ ಮಾಡಿಕೊಳ್ಳುತ್ತಿದ್ದಾರೆ ಇಂದು ಒಂದು ಮೈಲಿಗಲ್ಲು. ಸಿದ್ದರಾಮಯ್ಯ ಅವರು ಗ್ರಾಮೀಣದಿಂದ ಬಂದವರು. ಅವರು ಪಕ್ಷಾತೀತ ನಾಯಕರು ಕಾಂಗ್ರೆಸ್‌ನ ಎಲ್ಲ ನಾಯಕರು ಕಾರ್ಯಕರ್ತರು ಅವರ ಜನ್ಮದಿನವನ್ನು ಆಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಇದೆ ಸಂಧರ್ಬದಲ್ಲಿ, ಈ ಹಿಂದೆ ಕಾಂಗ್ರೆಸ್ ಪಕ್ಷ ಬಿಟ್ಟ ಹೋಗಿದ್ದ 17 ಜನ ಶಾಸಕರು ಪುನಃ ಪಕ್ಷಕ್ಕೆ ವಾಪಸ್ ಬರುವು ವಿಚಾರ ಬಗ್ಗೆ ನನಗೆ ಗೊತ್ತಿಲ್ಲ ಎಂದ ಎಂ.ಬಿ.ಪಾಟೀಲ್ ತಿಳಿಸಿದರು.
PublicNext
22/07/2022 04:13 pm