ಕಾಂಗ್ರೆಸ್ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿ ಅವರ ಇ.ಡಿ ವಿಚಾರಣೆ ಬಗ್ಗೆ ಅಥಣಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವರು ಸ್ಥಳೀಯ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದಾಗ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಸದ್ಯದ ಸ್ಥಿತಿ ನೋಡುವುದಾದರೆ ಕಾನೂನು ಬದ್ಧವಾಗಿ ಯಾವುದೇ ವಿಚಾರಣೆ ನಡೆಯುತ್ತಿಲ್ಲ. ಕಳೆದ ಐದು ವರ್ಷಗಳಲ್ಲಿ ಇಡಿ, ಐಟಿ, ಸಿಬಿಐ, ಜೆನ್ಸಿಗಳ ಮೂಲಕ ಕೇಂದ್ರ ಸರ್ಕಾರ ಬೇರೆ ಬೇರೆ ಪಕ್ಷದ ರಾಜಕಾರಣಿಗಳನ್ನ ಟಾರ್ಗೆಟ್ ಮಾಡುತ್ತಿದೆ. ಹಾಗಾಗಿ ನಾವು ಅವರ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದರು.
ಈಶ್ವರಪ್ಪ ಅವರ ಕೇಸಿಗೆ ಬಿ ರಿಪೋರ್ಟ್ ಹಾಕಿದ ವಿಚಾರವಾಗಿ ಮಾತನಾಡುತ್ತಾ ಮುಂಬರುವ ಅಧಿವೇಶನದಲ್ಲಿ ಗಂಭೀರವಾಗಿ ಚರ್ಚೆ ಮಾಡ್ತೀವಿ ನೋಡೋಣ ಎಂದರು. ಈ ವೇಳೆ ಕಾಂಗ್ರೆಸ್ ಚಿಕ್ಕೋಡಿ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಮುಖಂಡರಾದ ಅಸ್ಲಂ ನಾಲಬಂದ, ಗಜಾನನ ಮಂಗಸೂಳಿ, ರಮೇಶ್ ಸಿಂಧಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಂತೋಷ ಬಡಕಂಬಿ, ಪಬ್ಲಿಕ್ ನೆಕ್ಸ್ಟ್, ಅಥಣಿ
PublicNext
21/07/2022 04:52 pm