ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಜಿಸಿಎಲ್ ಹಬ್ಬಕ್ಕೆ ಬಂಜಾರ ಹಬ್ಬದ ಮೆರಗು

ಹತ್ತು ವರ್ಷಗಳ ಹಿಂದೆ ಇಡೀ ರಾಜ್ಯ ತಿರುಗಿ ನೋಡುವಂತೆ ಮಾಡಿದ್ದ ಗದಗ ಕ್ರಿಕೆಟ್ ಲೀಗ್‌ನ (GCL) ಮೂರನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. ಬಿಜೆಪಿ ನಾಯಕ ಅನಿಲ್ ಮೆಣಸಿನಕಾಯಿ ನೇತೃತ್ವದಲ್ಲಿ ಗದಗ ಹಬ್ಬದ ಸಂಭ್ರಮಕ್ಕಾಗಿ ತಿಂಗಳು ಮೊದಲೇ ಭರ್ಜರಿ ಸಿದ್ಧತೆ ನಡೆಯುತ್ತಿದೆ.

ಗದಗದಲ್ಲಿ ನಡೆಯುವ ಜಿಸಿಎಲ್ ಮೂರನೇ ಸೀಸನ್‌ನ್ನು ಈ ಬಾರಿ ಗದಗ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಅಕಾಡೆಮಿಯು ವಿಶಿಷ್ಟವಾಗಿ ಆಚರಿಸಲು ತಯಾರಿ ನಡೆಸುತ್ತಿದೆ. ವಿದೇಶಿ ಆಟ ಕ್ರಿಕೆಟ್ ಜೊತೆಗೆ ದೇಶಿಯ ಕ್ರೀಡೆಗಳನ್ನು ಆಯೋಜಿಸಲು ತಯಾರಿ ನಡೆಸುತ್ತಿದೆ. ಈ ಮೂಲಕ ದೇಶಿಯ ಕ್ರೀಡೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಅನಿಲ್ ಆಂಡ್ ಟೀಂ ಪಣತೊಟ್ಟಿದೆ.

ಗದಗ ಕ್ರಿಕೆಟ್ ಹಬ್ಬದ ಹಿನ್ನಲೆಯಲ್ಲಿ ಗದಗ ತಾಲೂಕಿನ ಬೆಳೆದಡಿ ಗ್ರಾಮದಲ್ಲಿ ಬಂಜಾರ ಹಬ್ಬ ಎಂಬ ಲಾಂಚನ ಬಿಡುಗಡೆ ಮಾಡಲಾಯಿತು.

ಲಾಂಚನ ಬಿಡುಗಡೆ ಮಾಡಿ ಮಾತನಾಡಿದ ಬಿಜೆಪಿ ನಾಯಕ ಅನೀಲ್ ಮೆಣಸಿನಕಾಯಿ, ದೇಶ ಅಲ್ಲದೇ ವಿಶ್ವದಲ್ಲಿ ವಿಶಿಷ್ಟ ಸಂಸ್ಕೃತಿ, ವೇಷಭೂಷಣ ಹೊಂದಿರುವ ಜನಾಂಗ ಅಂದರೆ ಅದು ಬಂಜಾರ ಜನಾಂಗ ಅವರು ವಿಶಿಷ್ಠವಾದ ಬಜನಾಪದಗಳು, ನೃತ್ಯ, ವೇಷಭೂಷಣ ಜನಮನ ಸೆಳೆಯುತ್ತವೆ. ಹಾಗಾಗಿ ಜಿಸಿಎಲ್‌ನಲ್ಲಿ ಬಂಜಾರ ಹಬ್ಬ ಎಂಬ ವಿಶೇಷ ಹಬ್ಬ ಆಚರಿಸಲು ನಿರ್ಧರಿಸಿದ್ದು ಖುಷಿ ತಂದಿದೆ. ಜಿಸಿಎಲ್ ಹಬ್ಬಕ್ಕೆ ಬಂಜಾರ ಹಬ್ಬದ ಮೆರಗು ತಂದು ಕೊಡಲಿದೆ. ಬಂಜಾರ ಜನಾಂಗದ ನನ್ನ ಎಲ್ಲಾ ಬಂಧುಗಳು ಹಬ್ಬ ಯಶಸ್ವಿ ಮಾಡಬೇಕು ಎಂದು ಹೇಳಿದರು.

Edited By :
PublicNext

PublicNext

18/07/2022 04:56 pm

Cinque Terre

86.26 K

Cinque Terre

2

ಸಂಬಂಧಿತ ಸುದ್ದಿ