ಉತ್ತರ ಕರ್ನಾಟಕ ಮುಖ್ಯಮಂತ್ರಿ ಆಗೊಲ್ಲ. ಅಖಂಡ ಕರ್ನಾಟಕ ಸಿಎಂ ಆಗುವ ಯೋಗ್ಯತೆ ನನಗಿದೆ ಎಂದು ಗದಗನ ಬಿಂಕದಕಟ್ಟಿಯಲ್ಲಿ ಅರಣ್ಯ ಖಾತೆ ಸಚಿವ ಉಮೇಶ ಕತ್ತಿ ಪುನರುಚ್ಛರಿಸಿದ್ದಾರೆ.
ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳ ನಿಮಿತ್ತ ಆಗಮಿಸಿದ್ದ ಅವರು ಮಾಧ್ಯಮಗಳೆದುರು ಮಾತನಾಡಿ, ಉತ್ತರ ಕರ್ನಾಟಕಕ್ಕೆ ಅನ್ಯಾಯವಾದ್ರೆ ರಾಜೀನಾಮೆಗೂ ಸಿದ್ಧನಿದ್ದೇನೆ. ನಮಗೆ ಬೇಕಾದ ಮಹದಾಯಿ, ಕೃಷ್ಣ, ಆಲಮಟ್ಟಿ ಅಭಿವೃದ್ಧಿಗೆ ದ್ರೋಹ ಮಾಡಿದ್ರೆ ರಾಜೀನಾಮೆಗೆ ರೆಡಿ ಇದ್ದೇನೆ ಅಂತ ಉತ್ತರ ಕರ್ನಾಟಕದ ತಮ್ಮ ಪ್ರೀತಿಯನ್ನ ಮತ್ತೊಮ್ಮೆ ಸಾಬೀತು ಪಡಿಸಿದರು. ಪ್ರತ್ಯೇಕ ಉತ್ತರ ಕರ್ನಾಟಕ ಧ್ವನಿ ಎತ್ತಬೇಕು. ನೀವೂ ಸ್ಪಂದಿಸ್ಬೇಕು, ಅಭಿವೃದ್ಧಿ ನಿಂತ್ರೆ ಹೋರಾಟ ಇದ್ದೇ ಇರುತ್ತೆ. ಅಭಿವೃದ್ಧಿ ನಡೆದ್ರೆ ತೊಂದ್ರೆ ಇಲ್ಲ. ಉತ್ತರ ಕರ್ನಾಟಕದ ಸಿಎಂ ಅನ್ನೋದನ್ನ ಬಿಡಿ. ನಾನು ಕರ್ನಾಟಕದ ಹಿರಿಯ ರಾಜಕಾರಣಿ, ನಮ್ಮವರೇ ಸಿಎಂ ಇದ್ದಾಗ ಸಿಎಂ ಆಸೆ ಪಡೋದಿಲ್ಲ. ಸಿಎಂ ಅವಕಾಶ ಬಂದ್ರೆ ನಸೀಬು. ಆದ್ರೆ ಬೆನ್ನು ಹತ್ತಿ ಹೋಗಲ್ಲ. ಕರ್ನಾಟಕದ ಮುಖ್ಯಮಂತ್ರಿ ಆಗ್ಬೇಕ. ಇನ್ನೂ 15 ವರ್ಷ ನನ್ನ ರಾಜಕೀಯ ಜೀವನ ಇದೆ. ಆದ್ರೆ ನೋಡೋಣ ಎಂದು ತಮ್ಮ ಸಿಎಂ ಇಂಗಿತವನ್ನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ 40% ಕಮಿಷನ್ ವಿಚಾರವಾಗಿ ಪ್ರತಿಕ್ರಿಯಿಸಿ ಗುತ್ತಿಗೆದಾರರ ಸಂಘಗಳು ಬಹಳ ಇವೆ. ಕೆಂಪಯ್ಯ ಯಾರು ಎಂಬುದು ಗೊತ್ತಿಲ್ಲ.
ಕೆಂಪಯ್ಯ ಸಿದ್ದರಾಮಯ್ಯರನ್ನ ಭೇಟಿಯಾಗಿದ್ದಾರೆ. 40% ಭ್ರಷ್ಟಾಚಾರ ನಡೆದಿದ್ರೆ ವಿರೋಧ ಪಕ್ಷದ ನಾಯಕ, ಸಿಎಂ ಅವರನ್ನು ಜನರನ್ನು ಬಿಡುತ್ತಿದ್ದರೆ?ಎಂದು ಪ್ರಶ್ನಿಸಿದರು. ಮಾಜಿ ಮುಖ್ಯಮಂತ್ರಿಗಳಾಗಿ ನಿಮ್ಮ ಇತಿಮಿತಿಯಲ್ಲಿ ಏನೇನಿದೆ ಅಂತಾ ಚರ್ಚೆ ಮಾಡೋಣ ಎಂದು ಮುಖಾಮುಖಿ ಚರ್ಚೆಗೆ ಸಿದ್ದರಾಮಯ್ಯರನ್ನ ಉಮೇಶ ಕತ್ತಿ ಆಹ್ವಾನಿಸಿದರು. ಭ್ರಷ್ಟಾಚಾರ ನಡೆದಿದ್ರೆ ಕೆಂಪಯ್ಯ, ಸಿದ್ದರಾಮಯ್ಯ ಕಂಪ್ಲೆಂಟ್ ಕೊಡ್ಲಿ. ಲೋಕಾಯುಕ್ತ, ಸಿಬಿಐ, ಈಡಿ ಎಲ್ಲಿ ಕಂಪ್ಲೆಂಟ್ ಕೊಡ್ತೀರಾ ಕೊಡಿ. ಕುಮಾರಸ್ವಾಮಿ ಆದಿಯಾಗಿ ಯಾರೇ ಆರೋಪ ಮಾಡಿದ್ರೂ ಕಂಪ್ಲೆಂಟ್ ಕೊಡಬೇಕು. ಮಂತ್ರಿ, ಸರ್ಕಾರ, ನನ್ನ ವಿರುದ್ಧ ಆರೋಪ ಇದ್ರೂ ಸಹ ಕಂಪ್ಲೆಂಟ್ ಕೊಡಿ ಎಂದು ಉಮೇಶ ಕತ್ತಿ ಹೇಳಿದ್ರು.
PublicNext
26/08/2022 04:12 pm