ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಹೊಡೆದಿದ್ದು ತಪ್ಪು, ವಿರೋಧ ಪಕ್ಷದ ನಾಯಕರಿಗೆ ಒಂದು ಸ್ಥಾನ ಹಾಗೂ ಗೌರವವಿದೆ. ಸಾರ್ವಜನಿಕ ರಂಗದಲ್ಲಿರುವವರು ಹಾಗೂ ಸಾರ್ವಜನಿಕರು ಅವರ ಸ್ಥಾನ ಗೌರವಿಸಬೇಕು ಎಂದು ಮಾಜಿ ಶಾಸಕ ಬಿ ಸುರೇಶ್ ಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗೌರಿಶಂಕರ್ ತಪ್ಪು ಮಾಡಿದಾಗ ಅದನ್ನು ಟೀಕೆ ಮಾಡಬೇಕು ಅದನ್ನು ಬಿಟ್ಟು ರಸ್ತೆಯಲ್ಲಿ ಕಾರು ಅಡ್ಡಹಾಕುವುದು. ಗಲಾಟೆ ಮಾಡುವುದು ಮಾಡಬಾರದು. ಸಿದ್ದರಾಮಯ್ಯ ಅವರ ಕಾರಿನ ಮೇಲೆ ಬಿಜೆಪಿ ಹಾಗೂ ಕಾಂಗ್ರೆಸ್ ಯಾವ ಪಕ್ಷದ ಕಾರ್ಯಕರ್ತರು ಮೊಟ್ಟೆ ಹೊಡೆದಿದ್ದೂ ಅದು ತಪ್ಪು ಎಂದರು.
ಪ್ರಚೋದನಕಾರಿ ಹೇಳಿಕೆ ನೀಡವುದನ್ನು ಸಿದ್ದರಾಮಯ್ಯ ನಿಲ್ಲಿಸಬೇಕು ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿ ಅವರ ಮನಸ್ಸು ಗೆಲ್ಲಬೇಕು, ಪ್ರಚೋದನಕಾರಿ ಹೇಳಿಕೆ ನೀಡಿದರೆ ಜನ ಮೊಟ್ಟೆಯಲ್ಲೂ ಹೊಡೆಯುತ್ತಾರೆ. ಕಲ್ಲಿನಲ್ಲೂ ಹೊಡೆಯುತ್ತಾರೆ ,ಕಾಂಗ್ರೆಸ್‌ನವರು ಈ ಕೆಲಸ ನಿಲ್ಲಿಸಬೇಕೆಂದು ವಿನಂತಿ ಮಾಡಿದರು.
PublicNext
22/08/2022 07:14 pm