ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು. ಅವರು ರಾಜಕೀಯದಲ್ಲಿ ಇದ್ದುಕೊಂಡು ಆಶೀರ್ವಾದ ಮಾಡಬೇಕು. ಸಿದ್ದರಾಮಯ್ಯ ಅಮೃತ ಮಹೋತ್ಸವದಲ್ಲಿಯೇ ರಾಜಕೀಯ ನಿವೃತ್ತಿ ಘೋಷಣೆ ಮಾಡಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ ನಾರಾಯಣ್ ತಿಳಿಸಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿದ್ದರಾಮಯ್ಯವರು ಹಿರಿಯರು, ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕರು ಅಮೃತ ಮಹೋತ್ಸವ ಮಾಡಿಕೊಳ್ಳುತ್ತಿರುವುದು ಸಂತೋಷ. ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ ಅವರು, ಈಗಾಗಲೇ ಸಿದ್ದರಾಮಯ್ಯನವರಿಗೆ 75 ವರ್ಷ ವಯಸ್ಸಾಗಿದೆ. ಏನ್ರಿ ಸುಮ್ಮನೆ ರಾಜಕೀಯದಲ್ಲಿ ಇದ್ದುಕೊಂಡು ಆಶೀರ್ವಾದ, ಮಾರ್ಗವನ್ನು ಮಾಡಬೇಕು. ಅವರ ಅಮೃತ ಮಹೋತ್ಸವದಲ್ಲಿಯೇ ರಾಜಕೀಯ ನಿವೃತ್ತಿ ಘೋಷಣೆ ಮಾಡಬೇಕೆಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಸಮಾಜದಲ್ಲಿ ಭ್ರಷ್ಟಾಚಾರದ ತಾಂಡವ, ಬುನಾದಿ ಹಾಕಿದ ಸಂಸ್ಕೃತಿ ಪಕ್ಷ ಕಾಂಗ್ರೆಸ್. ಈತ ಅದು ಸಂಪೂರ್ಣ ನೆಲೆ ಕಂಡುಕೊಳ್ಳುವಲ್ಲಿ ವಿಫಲವಾಗಿದೆ. ಆದಷ್ಟು ಬೇಗ ಕಾಂಗ್ರೆಸ್ ಅನ್ನು ಮ್ಯೂಸಿಯಂ ನಲ್ಲಿ ನೋಡುವ ಕಾಲ ಬರುತ್ತದೆ ಎಂದು ಭವಿಷ್ಯ ನುಡಿದರು.
ಡಾ. ಪ್ರಭಾಕರ ಕೋರೆ ಅವರು ಎಲ್ಲ ಸ್ಥಾನ ಅಲಂಕಾರ ಮಾಡಲು ಅರ್ಹರು. ಅವರ ಶ್ರೇಯಸ್ಸು ಹಾಗೂ ಅರ್ಹತೆಗೆ ಇನ್ನೂ ಹೆಚ್ಚು ಹೆಚ್ಚು ಸ್ಥಾನ ಪಡೆಯುವಂತಾಗಬೇಕು ಎಂದರು.
PublicNext
03/08/2022 03:09 pm