ಕೋಮುವಾದ ನಿರ್ನಾಮವಾಗಿ, ಒಳ್ಳೆಯ ಆಡಳಿತಕ್ಕಾಗಿ ಅಮೃತ ಮಹೋತ್ಸವ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ಹೆಚ್. ಸಿ. ಮಹಾದೇವಪ್ಪ ಹೇಳಿದ್ದಾರೆ.
ಹರಿಹರ ರಾಷ್ಟ್ರೀಯ ಹೆದ್ದಾರಿ ಮಾರ್ಗ ಮಧ್ಯೆ ಬರುವ ಶಾಮನೂರು ಶಿವಶಂಕರಪ್ಪ ಒಡೆತನದ ಅರಮನೆ ಮೈದಾನದಲ್ಲಿ ಸಿದ್ದರಾಮಯ್ಯರ 75ನೇ ವರ್ಷದ ಅಮೃತ ಮಹೋತ್ಸವದ ವೇದಿಕೆ ನಿರ್ಮಾಣ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಶ್ರೀರಾಮನ ಮಜ್ಜಿಗೆ ಮೇಲೆ ಇವರು ಜಿಎಸ್‌ಟಿ ಹಾಕಿದ್ದಾರೆ. ಇವರು ಹೆಂಗೆ ಶ್ರೀರಾಮನ ಭಕ್ತರಾಗುತ್ತಾರೆ ಎಂದು ಪ್ರಶ್ನಿಸಿದರು.
ಬಿಜೆಪಿ ಭ್ರಷ್ಟ ಅಡಳಿತವನ್ನು ಕೊನೆಗೊಳಿಸಲು ಈ ಕಾರ್ಯಕ್ರಮ ಅಮೃತ ಮಹೋತ್ಸವ ವ್ಯಕ್ತಿ ಪೂಜೆ ಅಲ್ಲ. ಒಬ್ಬ ಮಹಾನ್ ನಾಯಕನ 40 ವರ್ಷ ಸಾರ್ವಜನಿಕ ಜೀವನದ ಬಗ್ಗೆ ಜನರಿಗೆ ತಿಳಿಸುವುದೇ ನಮ್ಮ ಉದ್ದೇಶ. ಇದು ಪಕ್ಷದ ಕಾರ್ಯಕ್ರಮ ಅಲ್ಲ. ಪಕ್ಷದಲ್ಲಿನ ಜನರು ಸೇರಿ ಮಾಡುತ್ತಿರುವ ಕಾರ್ಯಕ್ರಮ ಎಂದು ಪುನರುಚ್ಚರಿಸಿದರು.
ರಾಹುಲ್ ಗಾಂಧಿ, ಸುರ್ಜಿವಾಲಾ, ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ. ಆದ್ದರಿಂದ ಬೇರೆ ಪಕ್ಷದ ಮುಖಂಡರನ್ನು ಆಹ್ವಾನ ಮಾಡಿಲ್ಲ ಎಂದು ಮಾಹಿತಿ ನೀಡಿದರು.
PublicNext
28/07/2022 04:25 pm