ಕೊರಟಗೆರೆ : ಗುರುವಾರ ಗೊರವನಹಳ್ಳಿ ಬಳಿ ಸೇತುವೆ ನೋಡಿ ಹೋದ ಕೆಲವೇ ನಿಮಿಷದಲ್ಲಿ ಸೇತುವೆ ಕುಸಿದಿದೆ. ಇನ್ನು ಸ್ವಲ್ಪದರಲ್ಲಿಯೇ ಪರಮೇಶ್ವರ್ ಅಪಾಯದಿಂದ ಪಾರಾಗಿದ್ದಾರೆ.ಡಾ.ಜಿ.ಪರಮೇಶ್ವರ್ ಭೇಟಿ ನೀಡಿ ಇನ್ನೇನು ಅಲ್ಲಿಂದ ಹೊರಟ ಐದೇ ನಿಮಿಷದಲ್ಲೇ ತೀತಾ ಸೇತುವೆ ಕುಸಿದು ಬಿದ್ದಿದೆ.ಅದೃಷ್ಟವಶಾತ್ ಪರಮೇಶ್ವರ್ ಅನಾಹುತದಿಂದ ಪಾರಾಗಿದ್ದಾರೆ.
ಕೊರಟಗೆರೆ ತಾಲ್ಲೂಕಿನ ತೀತಾ-ಗೊರವನಹಳ್ಳಿ ನಡುವಿನ ಸೇತುವೆ ಕುಸಿತಗೊಂಡಿದೆ. ತೀತಾ ಸೇತುವೆ ನಿನ್ನೆ ( ಗುರುವಾರ) ರಾತ್ರಿ ಸುರಿದ ಮಳೆಗೆ ಮುಂಜಾನೆ ಅರ್ಧ ಕುಸಿದಿತ್ತು.ಸೇತುವೆ ಕುಸಿತ ಹಿನ್ನೆಲೆ ಇಂದು(ಶುಕ್ರವಾರ) ಸಂಜೆ ಡಾ.ಜಿ ಪರಮೇಶ್ವರ್ ಅವರು ತಹಶೀಲ್ದಾರ್ ಜೊತೆಗೆ ಭೇಟಿ ನೀಡಿದ್ದರು.
ಭೇಟಿ ವೇಳೆ ಸೇತುವೆ ಮೇಲೆ ನಿಂತು ಸೇತುವೆ ಕುಸಿತವನ್ನು ವೀಕ್ಷಿಸಿದ್ದು, ಸೇತುವೆ ಸರಿ ಪಡಿಸುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ ನೀಡಿ ಮುಂದೆ ಹೋದ 5 ನಿಮಿಷಕ್ಕೆ ಸೇತುವೆಯ ಇನ್ನೊಂದು ಭಾಗ ಕುಸಿತಗೊಂಡಿದೆ.ಪರಮೇಶ್ವರ್ ನಿಂತು ವೀಕ್ಷಿಸಿದ್ದ ಸ್ಥಳವೂ ಸಹ ಕುಸಿತಗೊಂಡಿದೆ. ಇದರಿಂದ ಡಾ.ಜಿ.ಪರಮೇಶ್ವರ್ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ತೀತಾ ಡ್ಯಾಂ ನಿಂದ ನೀರು ಹರಿಯುವ ಹಳ್ಳಕ್ಕೆ ಅಡ್ಡಲಾಗಿ ಈ ಸೇತುವೆ ನಿರ್ಮಿಸಲಾಗಿದೆ. ಎಲ್ಲೆಡೆ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.
PublicNext
26/08/2022 10:38 pm