ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ: ಅತಿವೃಷ್ಟಿಗೆ ತತ್ತರಿಸಿದ ನಗರ, ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಭೇಟಿ

ಚಿಕ್ಕಬಳ್ಳಾಪುರ: ಹವಾಮಾನ ವೈಪರಿತ್ಯದಿಂದಾಗಿ ರಾಜ್ಯದಾದ್ಯಂತ ವಿಪರೀತ ಮಳೆಯಿಂದ ಜನ ತತ್ತರಿಸಿಹೋಗುತ್ತಿದ್ದು ನಗರದಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಆರೋಗ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಭೇಟಿ ನೀಡಿದ್ದಾರೆ. ಕಳೆದ 40 ವರ್ಷಗಳಲ್ಲೇ ಅತ್ಯಧಿಕ ಮಳೆ ನಗರದಲ್ಲಾಗಿದೆ, ಈ ಪ್ರಮಾಣದ ಮಳೆ ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ಬರದ ನಾಡಲ್ಲಿ ಮಲೆನಾಡಿನ ವೈಭವದಂತಾಗಿದ್ದರೂ ಅನೇಕ ಕೆರೆಗಳು ತುಂಬಿ ಹರಿದು ಬೆಳೆಗಳು ನಾಶವಾಗಿ ರೈತ ಸಮುದಾಯಕ್ಕೆ ನಷ್ಟವಾಗಿದೆ ಎಂದರು.

ಮುಂದಿನ ಎರಡ್ಮೂರು ದಿನ ಮಳೆ ಇರೋದ್ರಿಂದ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದು ಎಲ್ಲಾ ತಾಲ್ಲೂಕುಗಳಿಗೆ ಭೇಟಿ ನೀಡಿ ರಾಜಕಾಲುವೆ ಒತ್ತುವರಿ ತೆರವಿಗೆ ಸೂಚಿಸಲಾಗಿದೆ. ಈಗಾಗಲೇ ಅಕಾಲಿಕ ಮಳೆಗೆ ಜಿಲ್ಲೆಯಲ್ಲಿ 436 ಮನೆಗಳಿಗೆ ಹಾನಿಯಾಗಿದ್ದು ಮನೆ ಕಳೆದುಕೊಂಡವರಿಗೆ 5 ಲಕ್ಷ ರೂಪಾಯಿ ಪರಿಹಾರ ಕೊಡಲಾಗುತ್ತದೆ ಇದುವರೆಗೆ ಮಳೆಗೆ ಮೂರು ಜನ ಕೊಚ್ಚಿ ಹೋಗಿದ್ದಾರೆ. ಇನ್ನಾದರೂ ಜನ ಎಚ್ಚೆತ್ತುಕೊಳ್ಳಬೇಕು ಆದ್ದರಿಂದ ಸಮಾಜಿಕ ಜಾಲತಾಣಗಳ ಮೂಲಕ ಪ್ರಾಕೃತಿಕ ವಿಕೋಪ ತಡೆ ಹಾಗೂ ಅರಿವಿಗೆ ಜಿಲ್ಲಾಡಳಿತ ಸಜ್ಜಾಗಿದ್ದು ಮಳೆಯಿಂದ ಉಂಟಾಗುವ ಸಾಂಕ್ರಾಮಿಕ ರೋಗಗಳ ತಡೆಗೂ ಕ್ರಮ ಕೈಗೊಳ್ಳಲಾಗುತ್ತದೆ. ತಗ್ಗು ಪ್ರದೇಶಗಳಲ್ಲಿ ಮನೆ ಕಟ್ಟಿ ವಿನಾಕಾರಣ ಸರ್ಕಾರವನ್ನು ದೂರಿದರೆ ಪ್ರಯೋಜನವಿಲ್ಲ ಎಂದು ತಿಳಿಸಿದರು.

Edited By : Shivu K
PublicNext

PublicNext

20/11/2021 12:28 pm

Cinque Terre

63.89 K

Cinque Terre

0

ಸಂಬಂಧಿತ ಸುದ್ದಿ