ನವದೆಹಲಿ: 70 ವರ್ಷಗಳ ಅವಧಿಯಲ್ಲಿ ಮಾಲಿನ್ಯವಾಗಿರುವ ಯಮುನಾ ನದಿಯನ್ನು ಎರಡು ದಿನಗಳಲ್ಲಿ ಶುದ್ಧ ಮಾಡಲು ಸಾಧ್ಯವಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
2025ರ ಫೆಬ್ರುವರಿ ವೇಳೆಗೆ ಯಮುನಾ ನದಿಯ ನೀರನ್ನು ಸ್ನಾನಕ್ಕೆ ಬಳಸುವಷ್ಟು ಶುದ್ಧಗೊಳಿಸಲು ಆರು ಅಂಶಗಳ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದವರು ಹೇಳಿದ್ದಾರೆ. '2015ರ ದೆಹಲಿ ಚುನಾವಣೆ ವೇಳೆ, ನಾನು ಮುಂದಿನ ಚುನಾವಣೆ ವೇಳೆಗೆ ಯಮುನಾ ನದಿಯನ್ನು ಶುದ್ಧಗೊಳಿಸುವುದಾಗಿ ಜನರಿಗೆ ಭರವಸೆ ನೀಡಿದ್ದೆ. ಈ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಕೆಲಸವನ್ನು ಆರಂಭಿಸಿದ್ದೇವೆ. ಈ ಬಗ್ಗೆ ಸ್ವತಃ ನಾನೇ ಮೇಲ್ವಿಚಾರಣೆ ನಡೆಸಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಕೇಜ್ರಿವಾಲ್ ಹೇಳಿದ್ದಾರೆ.
PublicNext
18/11/2021 10:33 pm