ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟ್ರಯಲ್ ಬ್ಲಾಸ್ಟ್ ಮಾಡಬೇಡಿ, ಆ ಜಾಗ ನಮ್ಮದು: ಪ್ರಮೋದಾ ದೇವಿ

ಮೈಸೂರು: ಕೆಆರ್‌ಎಸ್ ಅಣೆಕಟ್ಟು ಸಮೀಪದ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡೋದು ಸರಿಯಲ್ಲ. ಅದು ನಮ್ಮ ಜಾಗ. ಅಲ್ಲಿ ಗಣಿಗಾರಿಕೆ ನಡೆಸದಿರಲು ನಾವು ಕಾನೂನಿನ ಮೊರೆ ಹೋಗುತ್ತೇವೆ ಎಂದು ರಾಜಮಾತೆ ಪ್ರಮೋದಾದೇವಿ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʻಟ್ರಯಲ್‌ ಬ್ಲಾಸ್ಟ್‌ ಮಾಡೋದು ಸರಿಯಲ್ಲʼ ರಾಜಮಾತೆ ಪ್ರಮೋದಾದೇವಿ ಹೇಳಿಕೆ ನೀಡಿದ್ದಾರೆ. 1950 ಕಾಲದಿಂದ ಬೆಟ್ಟದ 1,623 ಎಕರೆ ನಮ್ಮದು. ತಜ್ಞರು ಸರ್ಕಾರಿ ಜಾಗ ಗುರುತಿಸಿಕೊಳ್ಳಬೇಕು ನಾನು ಅಲ್ಲಿ ಗಣಿಗಾರಿಕೆಗೆ ಅವಕಾಶ ಕೊಡಲ್ಲ. ತಜ್ಞರ ಜೊತೆ ಚರ್ಚಿಸಿ ಕಾನೂನು ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ಸರ್ಕಾರ ನಮಗೆ ಕಿರುಕುಳ ನೀಡುತ್ತಿದೆ. ರಾಜಮನೆತನಗಳನ್ನು ಸರಿಯಾಗಿ ನಡೆಸಿಕೊಳ್ತಿಲ್ಲ. ಇಷ್ಟೊಂದು ತೊಂದ್ರೆ ಯಾವ ಸರ್ಕಾರವೂ ಕೊಟ್ಟಿಲ್ಲ. ಯಾಕಿಷ್ಟು ಹಿಂಸೆ ಕೊಡುತ್ತಿದ್ದಾರೋ ಗೊತ್ತಿಲ್ಲ ರಾಜಮನೆತನದ ಖಾಸಗಿ ಆಸ್ತಿಗಳನ್ನು ಘೋಷಿಸಿ ಉಳಿದ ಆಸ್ತಿ ದೇಶದೊಂದಿಗೆ ವಿಲೀನ ಮಾಡಿದ್ರು. 1950ರಲ್ಲಿ ಕೇಂದ್ರ ರಾಜವಂಶಸ್ಥ ನಡುವೆ ಒಪ್ಪಂದ ಮಾಡಿ 1951ರಲ್ಲಿ ಖಾಸಗಿ ಆಸ್ತಿ ಖಚಿತ ಪಡಿಸಲಾಗಿದೆ.

Edited By : Nagaraj Tulugeri
PublicNext

PublicNext

26/07/2022 04:53 pm

Cinque Terre

31.7 K

Cinque Terre

0

ಸಂಬಂಧಿತ ಸುದ್ದಿ