ಚಿಕ್ಕಮಗಳೂರು: ಕಡೂರು ತಾಲೂಕಿನ ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಅವರಿಗೆ ಏನ್ ಆಗಿದೆ. ಹೋಟೆಲ್ ಒಂದರಲ್ಲಿ ದೋಸೆ ಹಾಕ್ತಾಯಿದ್ದಾರೆ. ಶಾಸಕರಾಗಿ ಮಾಡಬೇಕಿರೋ ಕೆಲಸ ಸಾಕಷ್ಟಿದೆ. ಆದರೆ ಇದೇನಿದು ದೋಸೆ ಹಾಕ್ತಿದ್ದಾರೆ. ರಾಜಕೀಯ ಬಿಟ್ಟರೇ ಅಂತ ನೀವು ಕೇಳಬೇಡಿ. ಇಲ್ಲಿ ಕಾಣೋದು ಒಂದು. ಇರೋದು ಮತ್ತೊಂದು.ಬನ್ನಿ, ಹೇಳ್ತೀವಿ.
ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಇವತ್ತೊಂದು ಪ್ರಯೋಗ ಮಾಡಿದ್ದಾರೆ. ತಮಗೆ ದೋಸೆ ಹಾಕೋಕೆ ಬರುತ್ತದೋ ಇಲ್ಲವೋ ಅಂತ ತಮ್ಮನ್ನ ತಾವೇ ಹೀಗೆ ಟೆಸ್ಟ್ ಮಾಡಿಕೊಂಡಿದ್ದಾರೆ.
ಕಡೂರು-ಬೀರೂರು ಮಧ್ಯದ ರಸಂ ಹೋಟೆಲ್ ನಲ್ಲಿ ಶಾಸಕ ಬೆಳ್ಳಿ ಪ್ರಕಾಶ್, ದೋಸೆ ಪರೀಕ್ಷೆಗೆ ತಾವೇ ಒಳಪಟ್ಟಿದ್ದಾರೆ. ತಮ್ಮ ಈ ಪರೀಕ್ಷೆಯಲ್ಲಿ ತಾವೇ ಪಾಸ್ ಆಗಿದ್ದಾರೆ.
ಹೌದು. ಹಾಕಿರೋ ಮೂರು ದೋಸೆಗಳೂ ಚೆನ್ನಾಗಿಯೇ ಬಂದಿವೆ. ಇದನ್ನ ಯಾರೆಲ್ಲ ತಿಂದರೋ ಏನೋ. ಆದರೆ ರಸ್ತೆ ಪಕ್ಕದ ಹೋಟೆಲ್ ನಲ್ಲಿ ದೋಸೆ ಪ್ರಯೋಗ ಮಾಡಿ ಈಗ ಕಡೂರು ಶಾಸಕ ವೈರಲ್ ಆಗುತ್ತಿದ್ದಾರೆ.
PublicNext
24/01/2022 12:00 pm