ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ವಾರ್ಡ್ ಮರುವಿಂಗಡಣೆ ಮಾಡಲಾಗಿತ್ತು. ಈ ಮರುವಿಂಗಡಣೆಗೆ ಹಲವರಿಂದ ಆಕ್ಷೇಪ ವ್ಯಕ್ತವಾಗಿತ್ತು. ಆದರೆ ಕರ್ನಾಟಕ ಹೈಕೋರ್ಟ್ ಮರುವಿಂಗಡಣೆಯನ್ನು ಆಕ್ಷೇಪಿಸಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಗಳನ್ನು ವಜಾಗೊಳಿಸಿದೆ.
ಜಮೀರ್ ಅಹಮದ್ ಖಾನ್, ಸೌಮ್ಯ ರೆಡ್ಡಿ, ಸತೀಶ್ ರೆಡ್ಡಿ ಸೇರಿ ಹಲವರು ವಾರ್ಡ್ ಮರುವಿಂಗಡಣೆ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಪಕ್ಷ ಶಾಸಕರ ವಾರ್ಡ್ಗಳನ್ನು ಕಡಿತಗೊಳಸಲಾಗಿದೆ. ಹಲವೆಡೆ ವಾರ್ಡ್ ಮರುವಿಂಗಡಣೆ ದುರುದ್ದೇಶದಿಂದ ಕೂಡಿದೆ. ಹೀಗೆ ಹಲವು ಆಕ್ಷೇಪಗಳೊಂದಿಗೆ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಪೀಠ ವಜಾಗೊಳಿಸಿದೆ. ಇದೇ ವೇಳೆ ಹೈಕೋರ್ಟ್ ವಾರ್ಡ್ ಮೀಸಲಾತಿ ಕುರಿತ ಅರ್ಜಿ ವಿಚಾರಣೆ ಮುಂದೂಡಿದ್ದು, ಹೈಕೋರ್ಟ್ ಸೆ.21ಕ್ಕೆ ವಿಚಾರಣೆ ನಡೆಯಲಿದೆ.
PublicNext
16/09/2022 05:51 pm