ಬೆಂಗಳೂರು: ಕಾಂಗ್ರೆಸ್ ಶಾಸಕ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮತ್ತೆ ಸಿಬಿಐ ಕಂಟಕವಾಗೋ ಸಾಧ್ಯತೆಯಿದೆ. ಈಗಾಗಲೇ ದಾಖಲಾಗಿದ್ದ ಪ್ರಕರಣದ ತನಿಖೆಯನ್ನ ಸಿಬಿಐ ಚುರುಕುಗೊಳಿಸಿದೆ.
ಸದ್ಯ ಡಿಕೆ ಶಿವಕುಮಾರ್ ಅವರ ಆಪ್ತ ವಿಜಯ್ ಮುಳಗುಂದ್‌ಗೆ ಸಿಬಿಐ ನೋಟಿಸ್ ನೀಡಿದ್ದು, ಆಗಸ್ಟ್ 30ರಂದು ಬೆಂಗಳೂರು ಸಿಬಿಐ ಕಚೇರಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಿದೆ. 2020 ಅಕ್ಟೋಬರ್ 5ರಂದು ಡಿಕೆಶಿ ಮನೆ, ಕಚೇರಿ ಮತ್ತು ಆಪ್ತರ ಮನೆ ಮೇಲೆ ಸಿಬಿಐ ದಾಳಿ ನಡೆಸಿತ್ತು. ದಾಳಿ ಸಂಬಂಧ ವಿಚಾರಣೆಗೆ ಸಿಬಿಐ ಬುಲಾವ್ ನೀಡಿದೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ ಕೇಸ್‌ನಲ್ಲಿ ಸಿಬಿಐನಿಂದ ಮತ್ತೆ ಬುಲಾವ್ ಬಂದಿದ್ದು, ಆಪ್ತನಿಗೆ ಬುಲಾವ್ ಕೊಟ್ಟ ಬೆನ್ನಲ್ಲೇ ಮತ್ತೆ ಡಿಕೆಶಿಗೆ ಬುಲಾವ್ ಸಾಧ್ಯತೆಯಿದೆ?
2013ರಿಂದ 2018ರವರೆಗೆ ಶಾಸಕರಾಗಿದ್ದ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಆರೋಪ ಕೇಳಿಬಂದಿತ್ತು. 74.93 ಕೋಟಿ ಅಕ್ರಮ ಆಸ್ತಿ ಗಳಿಸಿದ್ದಾರೆ ಅಂತ ಸಿಬಿಐ ಆರೋಪಿಸಿತ್ತು. ಇದೀಗ ಸಿಬಿಐನಿಂದ ಆಪ್ತರಿಗೆ ಬುಲಾವ್ ಹಿನ್ನೆಲೆ ಡಿಕೆಶಿಗೆ ಢವ ಢವ ಶುರುವಾಗಿದೆ.
PublicNext
25/08/2022 11:35 am