ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು : ಫ್ಲೆಕ್ಸ್ ಕಟ್ಟುವ ವಿಚಾರ ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರ ಜಟಾಪಟಿ..!

ಕೊರಟಗೆರೆ: ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಫ್ಲೆಕ್ಸ್ ಕಟ್ಟುವ ವಿಚಾರವಾಗಿ ಮಂಗಳವಾರ ರಾತ್ರಿ ಕೊರಟಗೆರೆ ಪಟ್ಟಣದಲ್ಲಿ ಬೀದಿರಂಪ ಮಾಡಿಕೊಂಡಿದ್ದಾರೆ.

ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ಎಸ್ಎಸ್‌ಆರ್ ವೃತ್ತದಲ್ಲಿ ಆಗಸ್ಟ್-18ರಂದು ಜೆಡಿಎಸ್ ಮಾಜಿ ಶಾಸಕ ಪಿ.ಆರ್ ಸುಧಾಕರ್ ಲಾಲ್ ಹುಟ್ಟು ಆಚರಣೆ ಹಿನ್ನೆಲೆಯಲ್ಲಿ ಫ್ಲೆಕ್ಸ್ ಕಟ್ಟಲು ಮುಂದಾದ ಜೆಡಿಎಸ್ ಕಾರ್ಯಕರ್ತರು ಆಗಸ್ಟ್-8ರಂದು ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ಹಾಲಿ ಶಾಸಕ ಡಾ. ಜಿ ಪರಮೇಶ್ವರ್ ಅವರ ಫ್ಲೆಕ್ಸ್ ತೆರವಿಗೆ ಮುಂದಾದ ಸಂದರ್ಭದಲ್ಲಿ ಎರಡೂ ಪಕ್ಷದ ಕಾರ್ಯಕರ್ತರೂ ಸಹ ಮಾರಾಮಾರಿ ಮಾಡಿಕೊಂಡಿದ್ದಾರೆ. ಕೆಲವು ಕಾರ್ಯಕರ್ತರು ಪಾನಮತ್ತರಾಗಿ ಅವಾಚ್ಯ ಪದಗಳ ಬಳಸಿ ಬೀದಿ ರಂಪ ಮಾಡಿ ಕೊಂಡಿದ್ದಾರೆ. ನಂತರ ಪಿಎಸ್ಐ ಮಂಜುಳಾ ಘಟನಾ ಸ್ಥಳಕ್ಕೆ ಬಂದು ಎರಡೂ ಪಕ್ಷದ ಕಾರ್ಯಕರ್ತರನ್ನು ಸಮಾಧಾನ ಪಡಿಸಿ ಪರಿಸ್ಥಿತಿ ತಿಳಿಗೊಳಿಸಿ ಠಾಣೆಗೆ ಕೆರೆಸಿಕೊಂಡು ಬುದ್ದಿಹೇಳಿ ಕಳುಹಿಸಿದಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ಚುನಾವಣೆ ನಡೆಯಲು ಇನ್ನೂ ಹಲವು ತಿಂಗಳುಗಳು ಇದ್ದರೂ ಸಹ ಈಗಾಗಲೇ ಬೀದಿರಂಪ ಮಾಡಿಕೊಳ್ಳುತ್ತಿರುವ ಗಮನಿಸಿದ್ದರೆ ಕೊರಟಗೆರೆ ವಿಧಾನ ಸಭಾ ಕ್ಷೇತ್ರ ಹೈಹೋಲ್ಟೇಜ್ ಕ್ಷೇತ್ರವಾಗಿ ಮಾರ್ಪಾಡಾಗದಲಿದೆ ಎನ್ನಲಾಗುತ್ತಿದೆ. ಈ ವಿಚಾರವಾಗಿ ಹಾಲಿ ಮತ್ತು ಮಾಜಿ ಶಾಸಕರು ಯಾವುದೇ ಪ್ರತಿಕ್ರಿಯೆ ನೀಡಿಲು ನಿರಾಕರಿಸಿದ್ದಾರೆ. ಡಿವೈಎಸ್‌ಪಿ ವೆಂಕಟೇಶ್ ನಾಯ್ಡು ಠಾಣೆಗೆ ಎರಡು ಪಕ್ಷದ ಕಾರ್ಯಕರ್ತರನ್ನು ಕರೆಸಿ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವರದಿ; ರಾಘವೇಂದ್ರ ದಾಸರಹಳ್ಳಿ ಪಬ್ಲಿಕ್ ನೆಕ್ಸ್ಟ್

Edited By :
PublicNext

PublicNext

17/08/2022 04:22 pm

Cinque Terre

42.36 K

Cinque Terre

0

ಸಂಬಂಧಿತ ಸುದ್ದಿ