ಬೀದರ್: ಕರಾವಳಿ ಭಾಗದಲ್ಲಿ ನಡೆದ ಸರಣಿ ಕೊಲೆಗಳಲ್ಲಿ ಮೃತಪಟ್ಟ ಮೂವರ ಕುಟುಂಬಸ್ಥರನ್ನೂ ಭೇಟಿಯಾಗೋದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಬೀದರ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರವೀಣ್ ಕೊಲೆ ಕೇಸ್ ಎನ್‌ಐಎಗೆ ಕೊಡುವುದಾಗಿ ಹೇಳಿದ್ದಾರೆ. ಈವರೆಗೆ ಎನ್‌ಐಎಗೆ ಕೊಟ್ಟಿರುವ ಕೇಸ್ ಏನಾಗಿದೆ ಎಂಬುದು ಗೊತ್ತಿಲ್ಲ. ಎನ್‌ಐಎಗೆ ನೀಡಿ 5-6 ವರ್ಷ ಕಳೆದರೂ ಏನಾಗಿದೆ ಅಂತ ಗೊತ್ತಿಲ್ಲ. ಪ್ರವೀಣ್ ಕೊಲೆ ತನಿಖೆ ರಾಜ್ಯದ ಅಧಿಕಾರಿಗಳಿಗೆ ಕೊಡಿ. ಹಿಂದುತ್ವದ ಹೆಸರಲ್ಲಿ ನಮ್ಮನ್ನು ಗುಲಾಮರನ್ನಾಗಿ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಯುವಕರನ್ನೂ ಗುಲಾಮರನ್ನಾಗಿ ಮಾಡ್ತಿದ್ದಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಯಾವುದೆ ಕೊಲೆ ನಡೆಯಲಿಲ್ಲ. ಬಿಜೆಪಿ ಅವಧಿಯಲ್ಲಿ ಯಾಕೆ ಕೊಲೆಯಾಗ್ತಿದೆ ಎಂದು ಹೆಚ್ಡಿಕೆ ಪ್ರಶ್ನಿಸಿದ್ದಾರೆ.
PublicNext
30/07/2022 02:18 pm