ಶಿವಮೊಗ್ಗ: ರಾಜ್ಯದಲ್ಲಿ ಏನೇ ಘಟನೆ ನಡೆದರೂ ಪ್ರತಿಪಕ್ಷ ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸುತ್ತದೆ ಎಂದು ಆರಗ ಜ್ಞಾನೇಂದ್ರ ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಬಳಕೆ ಆಗಿದೆ. ಆ ಮೊಬೈಲ್‌ನಿಂದ ಅವರು ತಮ್ಮ ಸಂಬಂಧಿಕರೊಂದಿಗೆ ಮಾತನಾಡಿದ್ದಾರೆ. ಈ ಘಟನೆ ಕುರಿತು ಈಗಾಗಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಯಾರ ಮೊಬೈಲ್ ಬಳಕೆ ಮಾಡಿದ್ದಾರೆ ಅವರ ವಿರುದ್ಧ ಕೂಡ ಎಫ್ಐಆರ್ ದಾಖಲು ಆಗಿದೆ. ಈ ಜೈಲ್ ಶಿಕ್ಷೆ ಜೊತೆ ಅವರಿಗೆ ಮತ್ತೊಮ್ಮೆ ಶಿಕ್ಷೆ ಅನುಭವಿಸುವಂತಾಗಿದೆ. ಹೊರಗೆ ಇದ್ದು ಒಳಗೆ ಇದ್ದವರಿಗೆ ಸಹಾಯ ಮಾಡಿದವರ ಬಂಧನ ಕೂಡಾ ಆಗಿದೆ ಎಂದರು.
ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಮೇಲಿನ ಕೇಸ್ ತನಿಖೆ ಮುಂದುವರಿದಿದೆ ಎಂದು ಗೃಹ ಸಚಿವರು ಹೇಳಿದರು. ಗೃಹ ಸಚಿವರ ಮೇಲೆ ಮೃತ ಹರ್ಷ ಕುಟುಂಬದವರಿಂದ ಅಸಮಾಧಾನ ಕುರಿತು ಪ್ರತಿಕ್ರಿಯೆ ನೋಡಿ, ಹರ್ಷ ಕುಟುಂಬದ ಬಗ್ಗೆ ಗೌರವ ಇದೆ. ನಾನು ಕೂಡಾ ಸಾಂತ್ವನ ಹೇಳಿರುವೆ. ತಕ್ಷಣ ಹೋಗಿ ಎಲ್ಲವನ್ನೂ ನಿರ್ವಹಿಸಿದ್ದೆ. ಜೈಲಿನಲ್ಲಿ ಮೊಬೈಲ್ ಸಿಕ್ಕಿರುವ ಕುರಿತು ಅವರು ಏನೆಲ್ಲಾ ಮಾಡುತ್ತಿದ್ದಾರೆ ಎಂಬುದನ್ನ ಗೃಹ ಸಚಿವನಾಗಿ ಹಂಚಿಕೊಂಡಿರುವೆ. ಯಾಕೋ ಹರ್ಷ ಕುಟುಂಬಕ್ಕೆ ಸಮಾಧಾನವಾಗಿಲ್ಲ. ಇದಕ್ಕೆ ನಾನು ಏನು ಹೇಳೋದಕ್ಕೆ ಆಗೋದಿಲ್ಲ. ಅವರಿಗೆ ಅಗೌವರ ತೋರಿಲ್ಲ. ಮೊನ್ನೆ ಬೆಂಗಳೂರಿನಲ್ಲಿ ನನ್ನ ಜೊತೆ ಹರ್ಷ ಸಹೋದರಿ ಸಮಾಧಾನದಿಂದ ಮಾತನಾಡಿಲ್ಲ. ಆ ದಿನ 20 ಜನ ಶ್ರೀರಾಮ ಸೇನೆ ಕಾರ್ಯಕರ್ತರ ಜೊತೆ ಬಂದಿದ್ದರು. ಅಶ್ವಿನಿ ವರ್ತನೆಯಿಂದ ಶ್ರೀರಾಮಸೇನೆ ಕಾರ್ಯಕರ್ತರಿಗೂ ಬೇಜಾರಾಗಿದೆ ಎಂದರು.
--
ಶಿವಮೊಗ್ಗ ದಲ್ಲಿ ಧಾರಾಕಾರ ಮಳೆ ಹಿನ್ನೆಲೆ , ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿ ಆಗಿದೆ. ಮಳೆ ಹಾನಿಯನ್ನು ತಪ್ಪಿಸಲು ಆಗುವುದಿಲ್ಲ. ಮಳೆ ಹಾನಿಯಾದ ತಕ್ಷಣ ಪರಿಹಾರಕ್ಕೆ ಶಿವಮೊಗ್ಗ ಡಿ.ಸಿ ಮತ್ತು ತಹಸೀಲ್ದಾರ್‌ಗೆ ಸೂಚನೆ ನೀಡಲಾಗಿದೆ.
ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ಖಜಾನೆಯಲ್ಲಿ ಹಣ ಇದೆ. ತಕ್ಷಣ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಧಿಕಾರಿಗಳು ಸಮಸ್ಯೆ ಕೂಡಲೇ ಸ್ಪಂದಿಸಲು ಸೂಚನೆ ನೀಡಲಾಗಿದೆ ಎಂದರು.
ಅಮರನಾಥ್ ಯಾತ್ರೆಯಲ್ಲಿ ಎಷ್ಟು ಕನ್ನಡಿಗರು ಸಿಲುಕಿದ್ದಾರೆ ಎಂಬ ಮಾಹಿತಿ ಇಲ್ಲ. ಈಗಾಗಲೇ ರಾಜ್ಯ ಸರಕಾರದಿಂದ ಕರ್ನಾಟಕದ ಯಾತ್ರಿಗಳನ್ನು ಕರೆ ತರುವ ಪ್ರಕ್ರಿಯೆ ಆರಂಭವಾಗಿದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯದಲ್ಲಿ ತೊಡಗಿದ್ದಾರೆ. ಅಧಿಕಾರಿಗಳು ಕೇಂದ್ರ ದ ಜೊತೆ ನಿರಂತರ ಸಂಪರ್ಕ ದಲ್ಲಿದ್ದಾರೆ. ಒಬ್ಬರನ್ನು ಬಿಡದೇ ಅಲ್ಲಿಂದ ರಕ್ಷಣೆ ಮಾಡಿ ವಾಪಸ್ ತರುವ ಕೆಲಸ ರಾಜ್ಯ ಸರಕಾರ ಮಾಡುತ್ತದೆ ಎಂದರು.
PublicNext
09/07/2022 10:56 pm