ಚಿತ್ರದುರ್ಗ: ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕಾನೂನು ಪ್ರಕಾರವೇ ರಾಹುಲ್ ಗಾಂಧಿ ಅವರ ಮೇಲೆ ಕ್ರಮ ಕೈಗೊಂಡಿದ್ದಾರೆ. ಆದರೂ ಕಾಂಗ್ರೆಸ್ ನಾಯಕರು ನವದೆಹಲಿಯಲ್ಲಿ ಪ್ರತಿಭಟನೆ ಮೂಲಕ ಬೆದರಿಕೆ ಒಡ್ಡುವುದು ಉದ್ಧಟತನ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಸಿ. ಪಾಟೀಲ್, ಈ ರೀತಿ ಪ್ರತಿಭಟಿಸುವ ಮೂಲಕ ಕಾಂಗ್ರೆಸ್ ನಾಯಕರು ತಮ್ಮ ಮೂರ್ಖತನವನ್ನು ಪ್ರದರ್ಶಿಸುತ್ತಿದ್ದಾರೆ. ವಿಚಾರಣೆಗೆ ಬಂದು ಹೋಗಲು ರಾಹುಲ್ ಗಾಂಧಿಗೆ ಏನು ಸಮಸ್ಯೆ ಎಂಬುದು ಅರ್ಥವಾಗುತ್ತಿಲ್ಲ. ಇ.ಡಿ ವಿಚಾರಣೆಯೇ ಬೇಡ ಎಂದರೆ ಕಾನೂನು ಸುವ್ಯವಸ್ಥೆ ಉಳಿಯುತ್ತದೆಯೇ ಎಂದು ಪ್ರಶ್ನಿಸಿದ ಬಿಸಿ ಪಾಟೀಲ್, ರಾಹುಲ್ ಗಾಂಧಿ ಒಂದು ವೇಳೆ ತಪ್ಪು ಮಾಡಿಲ್ಲ ಎಂಬುದಾದರೆ ಕಾನೂನಿನ ರಕ್ಷಣೆ ಸಿಗುತ್ತದೆ. ಆದರೆ ಪ್ರತಿಭಟನೆ ಮೂಲಕ ಧಮ್ಕಿ ಹಾಕಿ ಬೆದರಿಕೆ ಒಡ್ಡುವುದು ಉದ್ಧಟತನವಲ್ಲದೇ ಮತ್ತೇನಲ್ಲ ಎಂದು ಬಿ.ಸಿ ಪಾಟೀಲ್ ಕಿಡಿಕಾರಿದರು.
PublicNext
16/06/2022 05:34 pm