ಶಿವಮೊಗ್ಗ: ರಾಜ್ಯದಲ್ಲಿ ಇನ್ನು ಮುಂದೆ ಗಲಭೆ ಆಗದಂತೆ ನೋಡಿಕೊಳ್ಳತ್ತೇವೆ. ಕಾನೂನು ಕೈಗೆತ್ತಿಕೊಳ್ಳುವವರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತಬಾಡಿದ ಅವರು ಕೋಮುವಾದ ಹಿಂದೆ ಕಾಣದ ಕೈಗಳಿವೆ. ಕೆಲವರ ಪ್ರಚೋದನೆಯಿಂದ ಇಂತಹ ಘಟನೆಗಳು ನಡೆಯುತ್ತಿವೆ. ಎಲ್ಲಾ ಸಮುದಾಯದವರು ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು. ಎಲ್ಲ ಧರ್ಮದವರು ಒಟ್ಟಾಗಿ, ಒಂದಾಗಿ ಇರಬೇಕು. ಸದ್ಯ ಹಳೇ ಹುಬ್ಬಳ್ಳಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಗಲಭೆಯಲ್ಲಿ ಪಾಲ್ಗೊಂಡವರ ಮೇಲೆ ಕಾನೂನು ಕ್ರಮ ಜರುಗಿಸಲಾಗಿದೆ ಎಂದರು.
ಇದೇ ವೇಳೆ 545 ಪಿಎಸ್ಐ ನೇಮಕಾತಿಗೆ ನಡೆದ ಪರೀಕ್ಷೆಗೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಅವ್ಯವಹಾರ ನಡೆದಿದೆ ಎನ್ನುವುದು ಇತ್ತೀಚಿಗೆ ನನ್ನ ಗಮನಕ್ಕೆ ಬಂದಿದ್ದು, ನನಗೆ ಇತ್ತೀಚಿಗೆ ಓಎಮ್‌ಆರ್ ಶೀಟ್ ನನಗೆ ಸಿಕ್ಕಿತ್ತು. ಈ ಬಗ್ಗೆ ನಾನು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆ. ಇದಲ್ಲದೇ ಈ ಬಗ್ಗೆ ಸಿಐಡಿ ತನಿಖೆ ಆಗಬೇಕು ಎಂದು ನಾನೇ ಸಿಎಂಗೆ ಮನವಿ ಮಾಡಿದ್ದೆ ಎಂದು ಜ್ಞಾನೇಂದ್ರ ತಿಳಿಸದರು.
PublicNext
19/04/2022 07:30 am