ಮೈಸೂರು: ಅಗೌರವ ತೋರಿದ ಅಗ್ನಿಶಾಮಕ ದಳದ ಅಧಿಕಾರಿಗಳ ಮೈಸೂರು ಮೇಯರ್ ಸುನಂದಾ ಪಾಲನೇತ್ರ ಅವರು ನಡು ರಸ್ತೆಯಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ಅಗ್ನಿಶಾಮಕ ಸೇವಾ ಸಪ್ತಾಹ ಅಂಗವಾಗಿ ಸೈಕಲ್ ಹಾಗೂ ಬೈಕ್ ರ‍್ಯಾಲಿಯಲ್ಲಿ ಮೈಸೂರು ಮೇಯರ್‍ಗೆ ಅಗೌರವ ಸೂಚಿಸಿಲಾಗಿದೆ. ಹೀಗಾಗಿ ಮೇಯರ್ ಸುನಂದಾ ಪಾಲನೇತ್ರ ಅಗ್ನಿಶಾಮಕ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿ ಆಕ್ರೋಶ ಹೊರಹಾಕಿದರು.
ಜಾಥಾ ಕಾರ್ಯಕ್ರಮ ಬೆಳಗ್ಗೆ 7ಕ್ಕೆ ನಿಗದಿಯಾಗಿತ್ತು. ಮೇಯರ್‍ಗೆ ಕರೆ ಮಾಡಿದ ಆಯೋಜಕರು 7:30ಕ್ಕೆ ಕಾರ್ಯಕ್ರಮ ಆರಂಭವಾಗುತ್ತದೆ ಅರ್ಧಗಂಟೆ ತಡವಾಗಿ ಬನ್ನಿ ಎಂದು ಹೇಳಿದ್ದಾರೆ. ಮೇಯರ್ ಸರಿಯಾಗಿ 7:30ಕ್ಕೆ ಕಾರ್ಯಕ್ರಮದ ಸ್ಥಳಕ್ಕೆ ಬಂದಾಗ ಶಾಕ್ ಆಗಿದ್ದಾರೆ. ಏಕೆಂದರೆ ಜಾಥಾ ಆಗಲೇ ಮುಂದೆ ಸಾಗಿತ್ತು. ಇದರಿಂದ ಸಿಡಿಮಿಡಿಗೊಂಡ ಮೇಯರ್ ಅಧಿಕಾರಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು.
PublicNext
17/04/2022 03:15 pm