ಹೊಸದಿಲ್ಲಿ: ಕಳೆದ 8 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದ್ದೀರಿ. ಇದುವರೆಗೆ ಎಷ್ಟು ಕಾಶ್ಮೀರಿ ಪಂಡಿತರನ್ನು ವಾಪಸ್ ಕಣಿವೆ ರಾಜ್ಯಕ್ಕೆ ಸ್ಥಳಾಂತರ ಮಾಡಿದ್ದೀರಿ? ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಿಜೆಪಿ ನಾಯಕರಿಗೆ ಪ್ರಶ್ನೆ ಮಾಡಿದ್ದಾರೆ. ಕಾಶ್ಮೀರಿ ಪಂಡಿತರು ಕಣಿವೆ ರಾಜ್ಯದಿಂದ ವಲಸೆ ಹೋದ ವಿಚಾರವನ್ನೇ ಇಟ್ಟುಕೊಂಡು ಕಮಲ ಪಾಳಯದವರು ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಮತ್ತೊಮ್ಮೆ, 'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದು ಆಗ್ರಹಿಸಿರುವ ಅವರು, ಸಿನಿಮಾದಿಂದ ಗಳಿಸಿದ ನೂರಾರು ಕೋಟಿ ರೂ. ಹಣವನ್ನು ಕಾಶ್ಮೀರಿ ಪಂಡಿತರ ಕಲ್ಯಾಣಕ್ಕಾಗಿ ವಿನಿಯೋಗಿಸಬೇಕು ಎಂದು ಸಲಹೆ ನೀಡಿದ್ದಾರೆ. "ಕಳೆದ 8 ವರ್ಷಗಳಲ್ಲಿ ಬಿಜೆಪಿಯಿಂದ ಒಂದೇ ಒಂದು ಕಾಶ್ಮೀರಿ ಪಂಡಿತ್ ಕುಟುಂಬವನ್ನಾದರೂ ಕಣಿವೆಗೆ ಸ್ಥಳಾಂತರಿಸಲಾಗಿದೆಯೇ?" ಎಂದು ಅರವಿಂದ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
PublicNext
27/03/2022 08:04 am