ಇಸ್ಲಾಮಾಬಾದ್ : ತಪ್ಪು ಯಾರೇ ಮಾಡಿರಲಿ ಅವರಿಗೆ ಶಿಕ್ಷೆ ಫಿಕ್ಸ್ ಎನ್ನುವುದಕ್ಕೆ ಈಗಾ ಪಾಕ್ ಪ್ರಧಾನಿಗೆ ಚುನಾವಣಾ ಆಯೋಗ 50,000 ರೂ. ದಂಡ ವಿಧಿಸಿದ್ದೇ ಸಾಕ್ಷಿ.
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಖೈಬರ್-ಪಖ್ತುಂಖ್ವಾದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನ ಸ್ವಾತ್ ನಲ್ಲಿ ನಡೆದ ರ್‍ಯಾಲಿಯಲ್ಲಿ ಪಾಲ್ಗೊಂಡು ಭಾಷಣ ಮಾಡುವ ಮೂಲಕ ಪಾಕ್ ಪ್ರಧಾನಿ, ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಪರಿಣಾಮವಾಗಿ ಆಯೋಗ ದಂಡ ಹಾಕಿದೆ.
ಸಾರ್ವಜನಿಕ ರ್‍ಯಾಲಿ ಆಯೋಜಿಸುವುದನ್ನು ಪಾಕಿಸ್ತಾನದ ಚುನಾವಣಾ ಆಯೋಗವು ನಿರ್ಬಂಧಿಸಿತ್ತು. ಆದರೆ ಪ್ರಧಾನ ಮಂತ್ರಿ, ಆಯೋಗದ ಆದೇಶವನ್ನು ಉಲ್ಲಂಘಿಸಿದ್ದರು. ಮಾ.31ರಂದು ಖೈಬರ್-ಪಖ್ತುಂಖ್ವಾದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಎರಡನೇ ಹಂತದ ಚುನಾವಣೆ ನಡೆಯಲಿದೆ.
PublicNext
23/03/2022 05:42 pm