ಶ್ರೀನಗರ: ಹಿಜಾಬ್ ಧರಿಸುವುದು ಇಸ್ಲಾಮ್ ಧರ್ಮದಲ್ಲಿ ಅತ್ಯಗತ್ಯ ಆಚರಣೆ ಅಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಈ ತೀರ್ಪಿನಿಂದ ತೀವ್ರ ನಿರಾಸೆಯಾಗಿದೆ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕರ್ನಾಟಕದ ಉಚ್ಚ ನ್ಯಾಯಾಲಯದ ತೀರ್ಪಿನಿಂದ ಬಹಳ ನಿರಾಸೆಯಾಗಿದೆ. ಹಿಜಾಬ್ ಬಟ್ಟೆಯು ವಸ್ತುವಾಗಿಲ್ಲ, ಇದು ಮಹಿಳೆಯ ಆಯ್ಕೆಯಾಗಿದೆ. ಇದನ್ನು ಧರಿಸಲು ಮಹಿಳೆ ಇಷ್ಟಪಡುತ್ತಾಳೆ. ಇದರಿಂದಾಗಿ ಮಹಿಳೆಯ ಹಕ್ಕಿನ ಬಗ್ಗೆ ನೀಡಿದ ತೀರ್ಪು ಇದಾಗಿದೆ. ನ್ಯಾಯಾಲಯವು ಈ ಮೂಲಭೂತ ಹಕ್ಕನ್ನು ಎತ್ತಿ ಹಿಡಿಯದಿರುವುದು ಬೇಸರ ತಂದಿದೆ ಎಂದು ತಿಳಿಸಿದ್ದಾರೆ.
PublicNext
15/03/2022 04:58 pm