ಭೋಪಾಲ್: ಮಧ್ಯ ಪ್ರದೇಶದಲ್ಲಿ ಮದ್ಯ ನಿಷೇಧ ಆಗಲೇಬೇಕೆಂದು ಒತ್ತಾಯಿಸಿ ಕೇಂದ್ರದ ಮಾಜಿ ಸಚಿವೆ ಉಮಾಭಾರತಿ ಭೋಪಾಲ್ ನಗರದ ಮದ್ಯದಂಗಡಿಗೆ ಕಲ್ಲೆಸೆದಿದ್ದಾರೆ. ರಾಜ್ಯದಲ್ಲಿ ಮದ್ಯ ನಿಷೇಧ ಆಗಲೇಬೇಕು ಎಂಬುದು ಅವರ ಒತ್ತಾಯವಾಗಿದೆ.
ತಾವು ಮದ್ಯದಂಗಡಿಗೆ ಕಲ್ಲು ಎಸೆದ ವಿಡಿಯೋ ಒಂದನ್ನು ಟ್ವಿಟರ್ ಮೂಲಕ ಹಂಚಿಕೊಂಡಿರುವ ಅವರು ಭೋಪಾಲ್‌ನ ಬರ್ಖೇಡಾ ಪಠಾನಿ ಆಜಾದ್ ನಗರದ, ಲೇಬರ್ ಕಾಲೋನಿಯಲ್ಲಿ ಮದ್ಯದ ಅಂಗಡಿಗಳ ಸಾಲು ಇದೆ. ಇಲ್ಲಿನ ನಿವಾಸಿ ಗಳು, ಮಹಿಳೆಯರು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದರು. ನಾನು ಒಂದು ವಾರದೊಳಗೆ ಅಂಗಡಿ ಮತ್ತು ಅಂಗಳವನ್ನು ಮುಚ್ಚುವಂತೆ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದೇನೆ ಎಂದಿದ್ದಾರೆ. ಸದ್ಯ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ತಮ್ಮದೇ ಸರ್ಕಾರದ ಅಬಕಾರಿ ನೀತಿ ವಿರುದ್ಧ ಉಮಾಭಾರತಿ ಸಿಡಿದೆದ್ದಿದ್ದಾರೆ.
PublicNext
14/03/2022 11:48 am