ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮರು ಆರಂಭವಾದ ಮೇಕೆದಾಟು ಪಾದಯಾತ್ರೆ : 37 ಕಾಂಗ್ರೆಸ್ ನಾಯಕರ ವಿರುದ್ಧ FIR

ಬೆಂಗಳೂರು: ಕೋವಿಡ್ ಕಾರಣದಿಂದ ಅರ್ಥಕ್ಕೆ ಮೊಟಕುಗೊಂಡಿದ್ದ ಕಾಂಗ್ರೆಸ್ ಮೇಕೆದಾಟು ಯೋಜನೆ ಮರು ಆರಂಭವಾಗಿದೆ. 2 ದಿನದ ಪಾದಯಾತ್ರೆ ಬಿಡದಿಯಿಂದ ಬೆಂಗಳೂರು ತಲುಪಿದೆ. ಇದೇ ವೇಳೆ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಹಿನ್ನೆಲೆಯಲ್ಲಿ 37 ಜನ ಕಾಂಗ್ರೆಸ್ ನಾಯಕರ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಫೆಬ್ರವರಿ 27 ರಂದು ನಿಯಮ ಉಲ್ಲಂಘಿಸಿ ಪಾದಯಾತ್ರೆ ನಡೆಸಿದ ಆರೋಪದಡಿ, ಪ್ಯಾಂಡೆಮಿಕ್ ಆಕ್ಟ್ ನಡಿ ರಾಮನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇವತ್ತು ಬಿಡದಿಯಿಂದ 21 ಕಿ.ಮೀ ದೂರ ಕಾಂಗ್ರೆಸ್ ನಾಯಕರು ಹೆಜ್ಜೆ ಹಾಕಿದರು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜಿ.ಪರಮೇಶ್ವರ್ ಸೇರಿದಂತೆ ಎಲ್ಲಾ ನಾಯಕರು ಜಂಟಿಯಾಗಿ ಪಾದಯಾತ್ರೆಯಲ್ಲಿ ಪಾಲ್ಗೊಂಡರು.

ಕಾಂಗ್ರೆಸ್ ಪಾದಯಾತ್ರೆಗೆ ಚಿತ್ರದುರ್ಗದ ಮುರುಘಾ ಶ್ರೀಗಳು ಸೇರಿದಂತೆ ವಿವಿಧ ಸ್ವಾಮೀಜಿಗಳು ಭಾಗಿಯಾಗಿದ್ದರು.

Edited By : Nirmala Aralikatti
PublicNext

PublicNext

28/02/2022 10:55 pm

Cinque Terre

56.54 K

Cinque Terre

4

ಸಂಬಂಧಿತ ಸುದ್ದಿ