ಶಿವಮೊಗ್ಗ:ಬಜರಂಗ ದಳದ ಕಾರ್ಯಕರ್ತ ಹರ್ಷನ ಕೊಲೆ ಆಗಿದೆ. ಈ ಕೊಲೆಗೆ ಸಂಬಂಧಿಸಿದಂತೆ ನಿನ್ನೆ ರಾತ್ರಿನೆ ಮೂವರ ಬಂಧನ ಆಗಿದೆ. ಇಲ್ಲಿವರೆಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕರನ್ನ ಬಂಧಿಸಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಅಮಾಯಕರನ್ನ ಅರೆಸ್ಟ್ ಮಾಡೋದಿಲ್ಲ. ತಪ್ಪಿತಸ್ಥರನ್ನ ಬಿಡೋದಿಲ್ಲ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಯಾವುದೇ ಸರ್ಕಾರ ಇದ್ದರೂ ಸರಿಯೇ. 24 ಗಂಟೆಗಳ ಕಾಲ ಕಾವಲು ಕಾಯೋದಕ್ಕೆ ಆಗೋದಿಲ್ಲ ಅಂತಲೇ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಇತ್ತೀಚಿಗೆ ಹಾವಳಿ ಜಾಸ್ತಿ ಆಗಿದೆ. ಮುಂದೆ ಅನಾಹುತ ಆಗದಂತೆ ತಡೆಯುವ ಕೆಲಸ ಮಾಡುತ್ತೇವೆ. ಹಿಂಸಾಚಾರ,ಕಲ್ಲು ತೂರಾಟ ಮಾಡಿದವರನ್ನ ಬಂಧಿಸುತ್ತೇವೆ ಅಂತಲೇ ಖಡಕ್ ಆಗಿಯೇ ಗೃಹ ಸಚಿವ ಆರಗ ಜ್ಞಾನೇಂದ್ರೆ ಹೇಳಿಕೆ ಕೊಟ್ಟಿದ್ದಾರೆ.
PublicNext
22/02/2022 10:21 am