ಪಂಜಾಬ್ ಸರಕಾರದ ಬೇಜವಾಬ್ದಾರಿಯಿಂದಾಗಿ ಇಂದು ಪ್ರಧಾನಿ ಭದ್ರತೆಯೊಂದಿಗೆ ಚಲ್ಲಾಟವಾಡಿದ ಘಟನೆ ಜರುಗಿದೆ. ಇದು ಪಂಜಾಬ್ ಗುಪ್ತಚರ ಇಲಾಖೆ ಹಾಗೂ ಡಿಜಿಪಿಯ ವೈಪಲ್ಯ ಹಾಗೂ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಇದೆಲ್ಲವೂ ಗೊತ್ತಿದ್ದರೂ ಪಂಜಾಬ್ ಕಾಂಗ್ರೆಸ್ ಮುಖ್ಯಮಂತ್ರಿ ಚೆನ್ನಿ ಅವರು ಮೌನಕ್ಕೆ ಶರಣು ಹೋಗಿದ್ದರೆ, ಪ್ರಧಾನಿ ವಿರುದ್ಧ ರೈತರ ಹೆಸರಲ್ಲಿ ಕಾಂಗ್ರೆಸ್ ನಾಯಕರು ಪತ್ರಿಭಟನೆ ನಡೆಸಿ" ಹೌ ಇಸ್ ಜೋಶ್ '' ಎಂದು ಟ್ವೀಟ್ ಮಾಡಿ ತಮ್ಮ ನರಿ ಬುದ್ಧಿ ತೋರಿಸಿದ್ದಾರೆ.
ಇದೆಲ್ಲ ನೋಡಿದರೆ ಪಂಜಾಬ್ ಸರಕಾರ ಪ್ರಧಾನಿ ವಿರುದ್ಧ ಪಿತೂರಿ ನಡೆಸಿದ್ದು ಸಾಬೀತಾಗಿದೆ. ಅದೂ ಪಾಕಿಸ್ತಾನ ಗಡಿಯಿಂದ ಕೆಲವೆ ಕೆಲವು ಕಿಮಿ ದೂರದಲ್ಲಿ.
ಇಂದು ಪ್ರಧಾನಿ ಮೋದಿ ಅವರದು ಪಂಜಾಬ್ ದಲ್ಲಿ ಯಾವುದೇ ರಾಜಕೀಯ ಕಾರ್ಯಕ್ರಮವಿರಲಿಲ್ಲ. ಬದಲಾಗಿ ಹುತಾತ್ಮ ಸ್ಮಾರಕಕ್ಕೆ ಗೌರವ ಸಲ್ಲಿಸಲು ಅವರು ಫಿರೋಜ್ ಪುರಕ್ಕೆ ತೆರಬೇಕಾಗಿತ್ತು. ಆದರೆ ವಿಪರೀತ ಮಳೆಯಿಂದಾಗಿ ಅವರು ಭಟಿಂಡಾದಲ್ಲಿ ಇಳಿದು ರಸ್ತೆ ಮೂಲಕ ಹುತಾತ್ಮ ಸ್ಮಾರಕದತ್ತ ತೆರಳಲು ಅವಕಾಶ ಕಲ್ಪಿಸಲಾಗಿತ್ತು.
ಪ್ರಧಾನಿ ರಸ್ತೆ ಮೂಲಕ ತೆರಳುತ್ತಿರುವುದರಿಂದ ಭಧ್ರತೆ ದೃಷ್ಟಿಯಿಂದ ಪಂಜಾಬ್ ಪೊಲೀಸರಿಗೆ ಸೂಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು. ಇಷ್ಟೇ ಅಲ್ಲ, ಪ್ರಧಾನಿ ರಸ್ತೆ ಮೂಲಕ ತೆರಳುತ್ತಿರುವುದನ್ನು ಗೌಪ್ಯವಿಡಲಾಗಿತ್ತು.
ಆದರೆ ಪ್ರಧಾನಿಗೆ ಭದ್ರತೆ ಒದಗಿಸ ಬೇಕಾಗಿದ್ದ ಪಂಜಾಬ್ ಪೊಲೀಸ್ ಮಹಾ ನಿರ್ದೇಶಕ ಮಹಾಶಯ ಯಾವುದೇ ಕ್ರಮಗೊಳ್ಳಲಿಲ್ಲ. ಬದಲಾಗಿ ಪ್ರಧಾನಿ ರಸ್ತೆ ಮೂಲಕ ತೆರಳುತ್ತಿರುವುದನ್ನೂ ಗೌಪ್ಯವಾಗಿ ಇಡಲಿಲ್ಲ. ಅದು ಬಹಿರಂಗವಾದ ಕಾರಣ ನೂರಾರು ಕಾಂಗ್ರೆಸ್ ಪ್ರತಿಭಟನಕಾರರು ರೈತರ ಹೆಸರಲ್ಲಿ ರಸ್ತೆ ಮಧ್ಯ ಜಮಾಯಿಸಿ ಪ್ರಧಾನಿ ಸಂಚಾರಕ್ಕೆ ಅಡ್ಡಿಯುಂಟು ಮಾಡಿದರು.
ಪ್ರೊಟೋಕಾಲ್ ಪ್ರಕಾರ ಮುಖ್ಯಮಂತ್ರಿ ಹಾಗೂ ಮುಖ್ಯಕಾರ್ಯದರ್ಶಿ ಪ್ರಧಾನಿಯನ್ನು ಸ್ವಾಗತಿಸಬೇಕು. ಅದ್ಯಾವುದೇ ಶಿಷ್ಟಾಚಾರಗಳು ನಡೆಯಲಿಲ್ಲ. ಪ್ರಧಾನಿ ರಸ್ತೆ ಸಂಚಾರದ ವಿಷಯವನ್ನು ಗೌಪ್ಯವಿಡಬೇಕಾದ ರಾಜ್ಯ ಪೊಲೀಸರು ಸಹ ಅದರಲ್ಲಿ ವಿಫಲರಾದರು. ಚುನಾವಣೆ ಇನ್ನೂ ಘೋಷಣೆಯಾಗಿಲ್ಲ ಹಾಗೂ ಯಾವುದೇ ನೀತಿ ಸಂಹಿತೆ ಜಾರಿಯಾಗಿಲ್ಲ ಅದೂ ಅಲ್ಲದೆ ಪ್ರಧಾನಿ ಹುತಾತ್ಮ ಸ್ಮಾರಕಕ್ಕೆ ಗೌರವ ಸಲ್ಲಿಸಲು ಬಂದಾಗ ಇಷ್ಟು ಬೇಜಬ್ದಾರಿಯೆ? ಇದರಲ್ಲೂ ಕಾಂಗ್ರೆಸ್ಸಿನ ರಾಜಕೀಯವೇ?
ಕಾಂಗ್ರೆಸ್ ಪಕ್ಷ ತನ್ನ ಸಣ್ಣಬುದ್ಧಿಯನ್ನು ತೋರಿಸಿದ್ದಲ್ಲದೆ " ಹೌ ಇಸ್ ಜೋಶ'' ಎಂದು ಟ್ವೀಟ್ ಮಾಡಿ ಪ್ರಧಾನಿ ಹುದ್ದೆಗೆ ಅವಮಾನ ಮಾಡಿದ್ದು ನಿಂದನಾರ್ಹ. ದೆಹಲಿಗೆ ಬಂದ ನಂತರ " ನಿಮ್ಮ ಮುಖ್ಯಮಂತ್ರಿಗೆ ನನ್ನ ಧನ್ಯವಾದಗಳನ್ನು ತಿಳಿಸಿ ನಾವು ಜೀವಂತ ಮರಳಿ ಬಂದಿದ್ದೇನೆ ಎಂದು '' ಎಂದು ಪ್ರಧಾನಿ ಟ್ವೀಟ್ ಮಾಡಿದ್ದು ಘಟನೆಯ ಗಂಭೀರತೆಗೆ ಸಾಕ್ಷಿಯಾಗಿದೆ.
PublicNext
05/01/2022 08:39 pm