ಕಾಬೂಲ್: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನ್ ಉಗ್ರ ಪಡೆ ಅಲ್ಲಿನ ಮಹಿಳೆಯರ ಸಾಮಾಜಿಕ ಸ್ವಾತಂತ್ರ್ಯಗಳನ್ನು ಒಂದೊಂದಾಗಿ ಕಸಿದುಕೊಳ್ಳುತ್ತಿದೆ. ಮೊದಲು ಹಿಜಾಬ್ ಧರಿಸುವುದು ಕಡ್ಡಾಯ ಎಂಬ ನಿಯಮ ಮಾಡಿತ್ತು. ಈಗ ತಮ್ಮ ಕುಟುಂಬದ ಪುರುಷ ಸಂಬಂಧಿ ಜೊತೆಗಿಲ್ಲದೇ ಎಲ್ಲೂ ಪಯಣಿಸುವಂತಿಲ್ಲ ಎಂಬ ನಿಯಮ ಜಾರಿ ಮಾಡಿದೆ.
ಕಡಿಮೆ ದೂರದ ಹೊರತಾಗಿ ಬೇರೆ ಯಾವುದಾದರೂ ಸ್ಥಳಕ್ಕೆ ಪ್ರಯಾಣಿಸಲು ಬಯಸುವ ಮಹಿಳೆಯರು ತಮ್ಮ ಹತ್ತಿರದ ಪುರುಷ ಸಂಬಂಧಿ ಜೊತೆಗೆ ಮಾತ್ರ ಪ್ರಯಾಣಿಸಬಹುದುದಾಗಿದೆ. ಜೊತೆಗೆ ಇಸ್ಲಾಮಿಕ್ ಹಿಜಾಬ್‌ಗಳನ್ನು ಧರಿಸದಿರುವವರಿಗೆ ಪ್ರಯಾಣಿಸಲು ಅವಕಾಶ ನೀಡಬಾರದು ಎಂದು ಅಫ್ಘಾನಿಸ್ತಾನದ ತಾಲಿಬಾನ್ ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.
ತಾಲಿಬಾನ್ ಸರ್ಕಾರದ ಸಚ್ಚಾರಿತ್ರ್ಯ ಬೆಂಬಲ ಮತ್ತು ದುರಾಚಾರ ನಿಯಂತ್ರಣ ಸಚಿವಾಲಯವು ಹೊರಡಿಸಿದ ಮಾರ್ಗಸೂಚಿಯಲ್ಲಿ, ಇಸ್ಲಾಮಿಕ್ ಹಿಜಾಬ್‌ಗಳನ್ನು ಧರಿಸಿರುವ ಮಹಿಳೆಯರಿಗೆ ಮಾತ್ರ ಪ್ರಯಾಣ ಮಾಡಲು ಅವಕಾಶ ನೀಡುವಂತೆ ಎಲ್ಲಾ ವಾಹನ ಮಾಲೀಕರಿಗೆ ಕರೆ ನೀಡಲಾಗಿದೆ.
PublicNext
26/12/2021 06:46 pm